ಮಂಗಳೂರು: ವಿದ್ಯುತ್ ಅಪಘಾತಕ್ಕೆ ರಿಕ್ಷಾ ಚಾಲಕರೊಬ್ಬರು ಬಲಿ.
ಮಂಗಳೂರು: ನಗರದ ರೋಸರಿಯೋ ಶಾಲಾ ಪರಿಸರದಲ್ಲಿ ಆಟೋ ಚಾಲಕರು ವಿದ್ಯುತ್ ತಂತಿ ತಗುಲಿ ಮೃತ ಪಟ್ಟ ಘಟನೆ ನಡೆದಿದೆ.
ಓರ್ವ ಚಾಲಕ ತನ್ನ ಆಟೋ ಬಳಿ ಬಂದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಿದ್ದಿದ್ದು ಅವರನ್ನು ರಕ್ಷಿಸಲು ಇನ್ನೋರ್ವ ಚಾಲಕರು ಮುಂದೆ ಹೋಗಿದ್ದು ಅವರು ಸಹ ವಿದ್ಯುತ್ ಆಘಾತಕ್ಕೆ ಒಳಗಾಗಿ ಇಬ್ಬರು ವಾಹನ ಚಾಲಕರು ಸಹ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳೀಯ ಕಾರ್ಪೊರೇಟರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.