ಮಂಗಳೂರು ನಗರದ ಪ್ರಖ್ಯಾತ ನಿರ್ಮಾಣ ಸಂಸ್ಥೆ ನಿಧಿಲ್ಯಾಂಡ್ ಡೆವಲಪ್ಪರ್ಸ್ ನಿಂದ ಎರಡು ನೂತನ ಐಶಾರಾಮಿ ವಸತಿ ಸಮುಚ್ಚಯಗಳಿಗೆ ಶಿಲಾನ್ಯಾಸ

0

ಮಂಗಳೂರು: ನಗರದ ಜನಪ್ರಿಯ ಹಾಗೂ ವಿಶ್ವಾಸಾರ್ಹ ನಿರ್ಮಾಣ ಸಂಸ್ಥೆ ನಿಧಿಲ್ಯಾಂಡ್ ಇನ್ ಫ್ರಾಸ್ಟ್ರಕ್ಚರ್ ಡೆವಲಪರ್ಸ್  ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ನಗರದ ಲೇಡಿಹಿಲ್-ಚಿಲಿಂಬಿ ಮುಖ್ಯರಸ್ತೆಯಲ್ಲಿ ಮತ್ತು ಕದ್ರಿ ಶಿವಭಾಗ್ ನಲ್ಲಿ ಎರಡು  ಐಶಾರಾಮಿ ವಸತಿ ಸಮುಚ್ಚಯ ‘ಸ್ಕೈ ಗಾರ್ಡನ್’  ಮತ್ತು  ಪೂರ್ವಜ್
ಅನ್ನು ನಿರ್ಮಿಸಲಿದೆ.ಇದರ ಶಿಲಾನ್ಯಾಸ ಏಪ್ರಿಲ್ ೩೦,ಬುಧವಾರದಂದು ನೆರವೇರಿತು.

ಸಮಾರಂಭದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕಿಯೋನಿಕ್ಸ್ನ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಭಾಸ್ಕರ್ ಮೊಯ್ಲಿ, ಮಂಗಳೂರಿನ ಬ್ರಹ್ಮಕುಮಾರೀಸ್ ಕೇಂದ್ರದ ಉಸ್ತುವಾರಿ ಬಿ.ಕೆ. ವಿಶ್ವೇಶ್ವರಿ, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೊ ಮತ್ತಿತರರು ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಸತಿ ಸಮುಚ್ಚಯದ ಬ್ರೋಷರ್ ಅನ್ನು ನಿಧಿಲ್ಯಾಂಡ್ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಪ್ರಶಾಂತ್ ಕೆ. ಸನಿಲ್ ಬಿಡುಗಡೆಗೊಳಿಸಿದರು.

*ಸ್ಕೈ ಗಾರ್ಡನ್:* ಮಂಗಳೂರಿನ ಲೇಡಿಹಿಲ್-ಚಿಲಿಂಬಿ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಳ್ಳಲಿದ್ದು, ಇದು 33 ಮಹಡಿಗಳ ಅತ್ಯಾಧುನಿಕ ಸೌಲಭ್ಯಯುಳ್ಳ ಐಷಾರಾಮಿ ವಸತಿ ಸಮುಚ್ಚಯವಾಗಿದೆ. ಕೆಳಗಿನ ಹಾಗೂ ಮೇಲಿನ ತಳ ಅಂತಸ್ತಿನಲ್ಲಿ ಕಾರ್ ಪಾರ್ಕಿಂಗ್ ಮತ್ತು ಮೇಲಿನ ನೆಲ ಅಂತಸ್ತು ಹಾಗೂ ಮೊದಲ ಅಂತಸ್ತಿನಲ್ಲಿ ಕ್ಲಬ್ ಹೌಸ್ ಸೌಲಭ್ಯಗಳನ್ನು ಒಳಗೊಂಡಿದೆ. ಸ್ಕೈ ಗಾರ್ಡನ್ ವಸತಿ ಸಮುಚ್ಚಯವು ವಿಶಾಲವಾದ 3 ಬಿಎಚ್‌ಕೆ, 4 ಬಿಎಚ್‌ಕೆ ಹಾಗೂ 5 ಬಿಎಚ್‌ಕೆ ಅಪಾರ್ಟ್ಮೆಂಟ್‌ಗಳು ಹಾಗೂ ಎರಡು ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್‌ಗಳನ್ನು ಗ್ರಾಹಕರ ಆದ್ಯತೆಗೆ ಅನುಗುಣವಾಗಿ ನಿರ್ಮಿಸಲಾಗುವುದು.
ಸ್ಕೈ ಗಾರ್ಡನ್ ನಿವಾಸಿಗಳಿಗೆ ಝೆನ್ ರೂಂ, ಯೋಗ/ ಎರೋಬಿಕ್ಸ್, ಮಕ್ಕಳ ಅಧ್ಯಯನ ಕೊಠಡಿ, ಮಕ್ಕಳ ಆಟದ ಪ್ರದೇಶ, ವಾಕಿಂಗ್/ ಜಾಗಿಂಗ್ ಟ್ರಾಕ್, ಓಝೋನೈಸ್ಡ್ ಸ್ವಿಮ್ಮಿಂಗ್ ಪೂಲ್, ಸುಸಜ್ಜಿತ ಜಿಮ್ನಾಸಿಯಮ್, ಟೇಬಲ್ ಟೆನ್ನಿಸ್, ಬಿಲಿಯರ್ಡ್ಸ್ ಟೇಬಲ್, ಚೆಸ್, ಕ್ಯಾರಮ್ ಮತ್ತು ಇತರ ಬೋರ್ಡ್ ಆಟಗಳ ಕೊಠಡಿ, ಕಾರ್ಡ್ಸ್ ರೂಮ್, ಮಿನಿ ಥಿಯೇಟರ್, ಸೌನಾ ಸ್ಟೀಮ್ ರೂಂ, ಜಕುಜಿ, ಕಟ್ಟಡದ ಪ್ರವೇಶದ್ವಾರದ ಬಳಿ ನೀರಿನ ಫೌಂಟೇನ್ ಹೊಂದಿರುವ ವೈಶಿಷ್ಟಯುತ ಗೋಡೆಗಳು, ಸಮ್ಮೇಳನ ಸಭಾಂಗಣ ಮತ್ತು ಇನ್ನೂ ಹಲವಾರು ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿರುತ್ತವೆ.

*ಪೂರ್ವಜ್:* ಮಂಗಳೂರಿನ ಪ್ರಶಾಂತವಾದ ಪರಿಸರ ಹೊಂದಿರುವ ಶಿವಬಾಗ್‌ನಲ್ಲಿ ನಿರ್ಮಾಣಗೊಳ್ಳಲಿದ್ದು ತಳ ಮತ್ತು ಕೆಳಗಿನ ನೆಲ ಅಂತಸ್ತಿನಲ್ಲಿ ಕಾರ್ ಪಾರ್ಕ್ ಸೌಲಭ್ಯ ಹಾಗೂ ಮೇಲಿನ ನೆಲ ಅಂತಸ್ತಿನಲ್ಲಿ ಕ್ಲಬ್ ಹೌಸ್ ಅಲ್ಲದೆ ಉಳಿದ 12 ಮಹಡಿಗಳಲ್ಲಿ ವಿಶಿಷ್ಟ 4 ಬಿಎಚ್‌ಕೆ ಗೃಹಗಳನ್ನು ಹೊಂದಿದೆ. ಪ್ರತಿಯೊಂದು ಮಹಡಿಗೂ ಒಂದೊಂದು ಅಪಾರ್ಟ್ಮೆಂಟ್ ಮಾತ್ರವಿದ್ದು ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಲು ಸಾಧ್ಯವಾಗುವ ವಿಶಾಲ ಕೋಣೆಗಳು ಪೂರ್ವಜ್ ವಸತಿ ಸಮುಚ್ಚಯದ ವೈಶಿಷ್ಟ್ಯವಾಗಿದೆ.
ಪೂರ್ವಜ್‌ನಲ್ಲೂ, ರೂಫ್‌ಟಾಪ್ ಓಝೋನೈಸ್ಡ್ ಸ್ವಿಮ್ಮಿಂಗ್ ಪೂಲ್, ಸುಸಜ್ಜಿತ ಜಿಮ್ನಾಸಿಯಮ್, ಬಿಲಿಯರ್ಡ್ಸ್ ಟೇಬಲ್, ಚೆಸ್/ ಕ್ಯಾರಮ್/ ಇತರ ಬೋರ್ಡ್ ಆಟಗಳ ಕೊಠಡಿ, ಸೌನಾ, ಸ್ಟೀಮ್ ರೂಂ, ಜಕುಜಿ, ಸಮ್ಮೇಳನ ಸಭಾಂಗಣ ಮುಂತಾದ ಆಧುನಿಕ ಸೌಲಭ್ಯಗಳು ಸಿದ್ಧಗೊಳ್ಳಲಿವೆ.
ಈ ಎರಡು ಪ್ರತಿಷ್ಟಿತ ವಸತಿ ಸಮುಚ್ಚಯಗಳ ಮೂಲಕ ನಿಧಿಲ್ಯಾಂಡ್ ಇನ್‌ಫ್ರಾಸ್ಟçಕ್ಚರ್ ಡೆವಲರ‍್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಂಗಳೂರಿನಲ್ಲಿ ಅತ್ಯಾಧುನಿಕವಾಗಿ ವಿಶಿಷ್ಟ ರೀತಿಯಲ್ಲಿ ಐಷಾರಾಮಿ ವಸತಿ ಸಮುಚ್ಚಯವನ್ನು ನಿರ್ಮಿಸುತಿದ್ದಾರೆ.

ನಿಧಿಲ್ಯಾಂಡ್ ಇನ್‌ ಫ್ರಾ ಸ್ಟ್ರಕ್ಚರ್  ಡೆವಲಪರ್ಸ್ಡೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬಗ್ಗೆ:

ನಿಧಿಲ್ಯಾಂಡ್ ಸಂಸ್ಥೆಯ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾದ ಪ್ರಶಾಂತ್ ಕೆ. ಸನಿಲ್ ಅವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 32 ವರ್ಷಗಳ ಅನುಭವ ಹೊಂದಿದ್ದಾರೆ. ಸಂಸ್ಥೆಯು ಆರಂಭವಾಗಿ 12 ವರ್ಷಗಳಾಗಿದ್ದು 11 ಯೋಜನೆಗಳನ್ನು ಪೂರ್ಣಗೊಳಿಸಿದೆ. ಶಕ್ತಿ ಹೈಟ್ಸ್ ಮತ್ತು ಸ್ಮೃತಿ ಹೈಟ್ಸ್ ನಿರ್ಮಾಣದ ಹಂತದಲ್ಲಿದ್ದು, ವೈಟ್ ರೋಸ್, ಬಿಸಿನೆಸ್ ಬೇ, ಬಿಸಿನೆಸ್ ಪಾರ್ಕ್, ಕ್ಯಾಸಲ್ ಗ್ರೀನ್ ಸಂಸ್ಥೆಯ ಮುಂಬರುವ ಪ್ರಮುಖ ಯೋಜನೆಗಳಾಗಿವೆ.

ಹೆಚ್ಚಿನ ವಿವರಗಳಿಗಾಗಿ ಮತ್ತು ಸಂಸ್ಥೆಯ ಬಗ್ಗೆ ಮತ್ತು ಸಂಸ್ಥೆಯ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಜಾಲತಾಣ nidhiland.com ಭೇಟಿ ನೀಡಬಹುದಾಗಿದೆ.

About The Author

Leave a Reply

Your email address will not be published. Required fields are marked *