ಮತ್ತೆ ವಿಶ್ವದ ನಂ. 1 ಶ್ರೀಮಂತನಾದ ಎಲಾನ್ ಮಸ್ಕ್

Business
oi-Punith BU
| Updated: Thursday, June 1, 2023, 12:28 [IST]
ನವದೆಹಲಿ, ಜೂನ್ 1: ವಿಶ್ವದಲ್ಲಿರವ ಶ್ರೀಮಂತರಲ್ಲಿ ಮೊದಲ ಸ್ಥಾನವನ್ನು ಮತ್ತೆ ಎಲಾನ್ ಮಸ್ಕ್ ಅವರು ಪಡೆದಿದ್ದಾರೆ. ಪ್ಯಾರಿಸ್ ವಹಿವಾಟಿನಲ್ಲಿ ಅರ್ನಾಲ್ಟ್‌ನ ಎಲ್‌ವಿಎಂಹೆಚ್ ಷೇರುಗಳು ಶೇಕಡಾ 2.6 ರಷ್ಟು ಕುಸಿದ ನಂತರ ಟೆಸ್ಲಾ ಇಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಬುಧವಾರ ಮೀರಿಸಿ ಮೊದಲಿಗರಾದರು.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ವಿಶ್ವದ 500 ಶ್ರೀಮಂತರ ಪಟ್ಟಿಯಲ್ಲಿರುವ 51 ವರ್ಷದ ಎಲಾನ್ ಮಸ್ಕ್ ಈ ವರ್ಷ ವಿಶ್ವದ ಅಗ್ರಗಣ್ಯನಾಗಿ ಬಿರುದಾಂಕಿತರಾದರು.
ಟೆಕ್ ಉದ್ಯಮವು ಆರ್ಥಿಕ ಸ್ಥಿತಿಯಿಂದ ಹೆಣಗಾಡುತ್ತಿರುವ ಮತ್ತು ಹಣದುಬ್ಬರದಿಂದ ಷೇರುಗಳು ಕುಸಿತ ಕಂಡುಬಂದರಿಂದ ಅರ್ನಾಲ್ಟ್ ಡಿಸೆಂಬರ್‌ನಲ್ಲಿ ಮಸ್ಕ್ ಅನ್ನು ಮೀರಿಸಿದ್ದರು. ಅರ್ನಾಲ್ಟ್ LVMH, ಲೂಯಿ ವಿಟಾನ್, ಫೆಂಡಿ ಮತ್ತು ಹೆನ್ನೆಸ್ಸಿ ಸೇರಿದಂತೆ ಬ್ರಾಂಡ್‌ಗಳನ್ನು ಸ್ಥಾಪಿಸಿದ್ದಾರೆ.
Twitter New CEO : ಟ್ವಿಟ್ಟರ್‌ಗೆ ಹೊಸ ಸಿಇಒ ನೇಮಿಸಿದ ಎಲಾನ್ ಮಸ್ಕ್
ಶ್ರೀಮಂತರ ನಿಧಾನವಾಗುತ್ತಿರುವ ಆರ್ಥಿಕ ಬೆಳವಣಿಗೆಯ ಚಿಹ್ನೆಗಳು ಮಸುಕಾಗಲು ಪ್ರಾರಂಭಿಸುತ್ತಿದೆ. ವಿಶೇಷವಾಗಿ ಚೀನಾದ ನಿರ್ಣಾಯಕ ಮಾರುಕಟ್ಟೆಯಲ್ಲಿ ಇದು ಕುಸಿತ ಕಂಡು ಬಂದಿದೆ. LVMH ಷೇರುಗಳು ಏಪ್ರಿಲ್‌ನಿಂದ ಸುಮಾರು 10 ಪ್ರತಿಶತದಷ್ಟು ಕುಸಿದಿವೆ, ಒಂದು ಹಂತದಲ್ಲಿ ಒಂದೇ ದಿನದಲ್ಲಿ ಅರ್ನಾಲ್ಟ್‌ನ ನಿವ್ವಳ ಮೌಲ್ಯದಿಂದ $11 ಶತಕೋಟಿಯನ್ನು ನಷ್ಟವಾಗಿಸಿದೆ.
ಈ ವರ್ಷ ಎಲಾನ್ ಮಸ್ಕ್ ಈ ವರ್ಷ 55.3 ಮಿಲಿಯನ್ ಡಾಲರ್ ಆದಾಯವನ್ನು ಈ ಆರ್ಥಿಕ ವರ್ಷದಲ್ಲಿ ಗಳಿಸಿದ್ದಾರೆ. ಆಸ್ಟಿನ್-ಆಧಾರಿತ ವಾಹನ ತಯಾರಕ ಟೆಸ್ಲಾ ಇದು ಅವರ ಸಂಪತ್ತಿನ 71 ಪ್ರತಿಶತವನ್ನು ಒಳಗೊಂಡಿದೆ. ಈ ವರ್ಷದಿಂದ ಇಲ್ಲಿಯವರೆಗೆ 66 ಪ್ರತಿಶತವನ್ನು ಒಟ್ಟುಗೂಡಿಸಿದೆ. ಸೂಚ್ಯಂಕದ ಪ್ರಕಾರ ಮಸ್ಕ್‌ನ ಸಂಪತ್ತು ಈಗ ಸುಮಾರು $192.3 ಶತಕೋಟಿ ಮೌಲ್ಯದ್ದಾಗಿದೆ. ಇದೇ ಅರ್ನಾಲ್ಟ್ ಅವರ ಸಂಪತ್ತು ಸುಮಾರು $186.6 ಬಿಲಿಯನ್ ಆಗಿದೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.
Allow Notifications
You have already subscribed
English summary
Elon Musk has again taken the first place among the richest people in the world. He became the first to overtake businessman Bernard Arnault on Wednesday.