ಮೈಸೂರು: ಒಂದೇ ಕುಟುಂಬದ ನಾಲ್ವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ.

0

ಮೈಸೂರು, : ಒಂದೇ ಕುಟುಂಬದ ನಾಲ್ವರ ಶವ ಪತ್ತೆ ಆಗಿರುವಂತಹ ಘಟನೆ ಮೈಸೂರಿನ ಚಾಮುಂಡಿಪುರಂ ಬಡಾವಣೆಯಲ್ಲಿ ನಡೆದಿದೆ. ಮನೆಯೊಂದರಲ್ಲಿ ದಂಪತಿ ಮಹದೇವಸ್ವಾಮಿ(48), ಅನಿತಾ (35), ಪುತ್ರಿಯರಾದ ಚಂದ್ರಕಲಾ(17), ಧನಲಕ್ಷ್ಮೀ(15) ಮೃತರು. ದೊಡ್ಡ ಮಗಳು ಚಂದ್ರಕಲಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅನಿತಾ ಮೃತದೇಹ ಕುರ್ಚಿ ಮೇಲೆ, ಚಿಕ್ಕ ಮಗಳು ಕೊಠಡಿಯಲ್ಲಿ ಮತ್ತು ಮಹದೇವ ಸ್ವಾಮಿ ಶವ ಹಾಲ್‌ನಲ್ಲಿ ಪತ್ತೆಯಾಗಿದೆ. ಮೃತ ಮಹದೇವಸ್ವಾಮಿ ಬಂಡಿಪಾಳ್ಯದಲ್ಲಿ ಮಳಿಗೆ ಹೊಂದಿದ್ದರು.

ಮೂಲತಃ ಮೈಸೂರು ತಾಲ್ಲೂಕು ಬರಡನಪುರ ಗ್ರಾಮದವರಾಗಿದ್ದು, ಎರಡು ತಿಂಗಳ ಹಿಂದೆ ಚಾಮುಂಡಿಪುರಂ ಬಡಾವಣೆಯಲ್ಲಿ ಬಾಡಿಗೆ ಮನೆ ಪಡೆದು ಕುಟುಂಬ ವಾಸವಾಗಿತ್ತು. ಸದ್ಯ ಪೊಲೀಸ್​ ಆಯುಕ್ತ ರಮೇಶ್ ಬಾನೋತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ಕುರಿತಾಗಿ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

About The Author

Leave a Reply

Your email address will not be published. Required fields are marked *