ಎಚ್ಡಿಕೆಗೆ ಮೈಲ್ಡ್ ಸ್ಟ್ರೋಕ್;
ಬೆಂಗಳೂರು: ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಇಂದು ಮುಂಜಾನೆ ಅವರು ಬೆಂಗಳೂರಿನ ಜಯನಗರ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಆ ಬಳಿಕ ಕುಮಾರಸ್ವಾಮಿ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಡಾ.ಸತೀಶ್ ಚಂದ್ರ ಅವರು ಮಾಜಿ ಸಿಎಂ ಅವರ ಆರೋಗ್ಯ ಬಗ್ಗೆ ಮಾಹಿತಿ ನೀಡಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರ ಎಡಭಾಗದಲ್ಲಿ ರಕ್ತನಾಳ ಸಮಸ್ಯೆಯಾಗಿತ್ತು. ಈ ಕಾರಣದಿಂದ ಎಡಭಾಗಕ್ಕೆ ಮೈಲ್ಡ್ ಸ್ಟ್ರೋಕ್ ಆಗಿತ್ತು. ಪರಿಣಾಮ ಮಾತು ತೊದಲುತ್ತಿತ್ತು, ತುಂಬಾ ಸುಸ್ತಾಗಿದ್ದರು. ಆದರೆ ಆಡ್ಮಿಟ್ ಆದ ಒಂದು ಗಂಟೆಯಲ್ಲೇ ಆರೋಗ್ಯವಾ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.ಅಲ್ಲದೇ, ಅವರನ್ನು ತುರ್ತು ಚಿಕಿತ್ಸಾ ಕೊಠಡಿಯಿಂದ ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ಮುಂದುವರಿಸಿದ್ದೇವೆ. ಈಗ ಅವರು ಉತ್ತಮವಾಗಿ ಮಾತನಾಡುತ್ತಿದ್ದಾರೆ. ನಾಳೆ ಜನರಲ್ ವಾರ್ಡ್ ಗೆ ಶಿಫ್ಟ್ ಮಾಡ್ತೀವಿ. ಇನ್ನೂ ಎರಡ್ಮೂರು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತೆ. ನಾಳೆ ಬೆಳಗ್ಗೆ ಅವರ ಮತ್ತೊಂದು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡೋದಾಗಿ ವೈದ್ಯರು ಮಾಹಿತಿ ನೀಡದ್ರು.ಈಗ ಅವರು ಎಲ್ಲರ ಜೊತೆ ಮಾತನಾಡುತ್ತಿದ್ದು, ಅವರು ಆರೋಗ್ಯವಾಗಿದ್ದಾರೆ. ಯಾವುದೇ ತೊಂದರೆ ಇಲ್ಲ. ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ ಕೈಯಲ್ಲಿ ತೊಂದರೆ ಇತ್ತು, ನಾವು ಕೂಡಲೇ ಚಿಕಿತ್ಸೆ ನೀಡಿದ ಕಾರಣ ರಿಕವರಿ ಆಯ್ತು. ಅಲ್ಲದೇ ಒಂದು ಗಂಟೆಯೊಳಗೆ ರಿಕವರಿ ಆಗಿದ್ದಾರೆ. ಬಿಪಿ, ಹಾರ್ಟ್ ಬೀಟ್ ಕೂಡ ಸರಿಯಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ, ಮಾತನಾಡಲು ತೊದಲುತ್ತಿಲ್ಲ ಎಂದು ವೈದ್ಯರು ವಿವರಿಸಿದರು.ಯಾರಿಗೆ ಆಗಲಿ ಸ್ಟ್ರೋಕ್ ಆದರೆ 3 ತಾಸಿನ ಒಳಗೆ ಆಸ್ಪತ್ರೆಗೆ ಕರೆತರಬೇಕು. ಇದರಿಂದ ನಾವು ಬೇಗನೆ ಅವರಿಗೆ ಔಷಧಿ ಕೊಟ್ಟಿದ್ದು, ಬಹುಬೇಗ ಗುಣಮುಖ ಆಗಲು ಕಾರಣವಾಯ್ತು. 3 ತಾಸಿನ ಒಳಗೆ ಆಸ್ಪತ್ರೆಗೆ ಬಂದರೇ ಯಾವುದೇ ಸ್ಟ್ರೋಕ್ ಆದರೂ ಪೂರ್ತಿಯಾಗಿ ಗುಣಪಡಿಸಬಹುದು, ಅದನ್ನು ನಾವು ವಿಡೋ ಟೈಮ್ ಎಂದು ಹೇಳುತ್ತೇವೆ ಎಂದು ವೈದ್ಯ ಸತೀಶ್ ಚಂದ್ರ ಅವರು ತಿಳಿಸಿದರು.ಇನ್ನು, ಕುಮಾರಸ್ವಾಮಿ ಅವರು ರಿಕವರಿ ಆಗಿದ್ದು, ಅವರಿಗೆ ಯಾವುದೇ ರೆಸ್ಟ್ ಏನೂ ಬೇಕಿಲ್ಲ. ಎಂದಿನಿಂತೆ ಅವರು ತಮ್ಮ ಕೆಲಸವನ್ನು ಮುಂದುವರಿಸಬಹುದು. 2-3 ದಿನದಲ್ಲಿ ತಮ್ಮ ಕೆಲಸ ತಾವೇ ಮಾಡುತ್ತಾರೆ. ಒಂದು ಗಂಟೆಯಲ್ಲೇ ಅವರು ರಿಕವರಿ ಆಗಿದ್ದಾರೆ. ಈಗ ಅವರು ಕುಳಿತುಕೊಂಡು ಮಾತನಾಡುತ್ತಿದ್ದಾರೆ ಎಂದು ವೈದ್ಯರು ಹೇಳಿದರು.ರಕ್ತ ಚಲನೆ ಕಡಿಮೆ ಆದ ಸಂದರ್ಭದಲ್ಲಿ ಆ ರೀತಿ ಆಗುತ್ತೆ. ಬಿಪಿ ಮತ್ತು ಡಯಾಬಿಟೀಸ್ ಇದ್ದ ಕಾರಣ ಕುಮಾರಸ್ವಾಮಿ ಅವರಿಗೆ ಸ್ವಲ್ಪ ಸಮಸ್ಯೆ ಆಗಿತ್ತು. ತಕ್ಷಣ ಅವರಿಗೆ ಔಷಧಿ ಕೊಟ್ಟ ಕಾರಣ ಬೇಗ ಗುಣಮುಖರಾಗಿದ್ದಾರೆ ಎಂದು ವೈದ್ಯರು ತಿಳಿಸಿದರು.