ನಿತ್ಯಾನಂದ ಸ್ವಾಮಿಗೆ ಸಿಐಡಿಯಿಂದ ರೆಡ್ ಕಾರ್ನರ್ ನೋಟಿಸ್

0

ಬೆಂಗಳೂರು: ರಾಮನಗರ ಜಿಲ್ಲೆ ಬಿಡದಿ ಧ್ಯಾನಪೀಠ ಆಶ್ರಮದ ನಿತ್ಯಾನಂದ ಸ್ವಾಮಿಗೆ ಮತ್ತೆ ಸಂಕಷ್ಟ.
ಅತ್ಯಾಚಾರ ಆರೋಪ ಪ್ರಕರಣದ ವಿಚಾರಣೆಗೆ ಗೈರಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಧ್ಯಾನಪೀಠ ಆಶ್ರಮದ ನಿತ್ಯಾನಂದ ಸ್ವಾಮಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಇಂಟರ್‌ಫೋಲ್‌ಗೆ ಸಿಐಡಿ ಪ್ರಸ್ತಾವನೆ ಸಲ್ಲಿಸಿದೆ.

ಅತ್ಯಾಚಾರ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ನಿತ್ಯಾನಂದ ಸ್ವಾಮೀ ವಿರುದ್ಧ ನ್ಯಾಯಾಲಯವು ವಾರಂಟ್ ಜಾರಿಗೊಳಿಸಿದೆ. ವಿದೇಶದಲ್ಲಿ ತಲೆಮರೆಕೊಂಡಿರುವ ನಿತ್ಯಾನಂದ ಸ್ವಾಮಿ ಪತ್ತೆಗೆ ಇಂಟರ್‌ಪೋಲ್‌ಗೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಪ್ರಸ್ತಾವನೆ ಕಳುಹಿಸಲಾಗಿದೆ. ಇಂಟರ್ ಪೋಲ್ ಅಧಿಕಾರಿಗಳು ಕೆಲವೊಂದು ಸ್ಪಷ್ಟೀಕರಣ ಕೇಳಿದ್ದಾರೆ. ಅವುಗಳಿಗೆ ದಾಖಲೆ ಸಮೇತ ವರದಿ ಸಲ್ಲಿಸಿರುವುದಾಗಿ ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ ಅವರು ತಿಳಿಸಿದ್ದಾರೆ.ರಾಮನಗರ ಜಿಲ್ಲೆ ಬಿಡದಿ ಧ್ಯಾನಪೀಠ ಆಶ್ರಮದ ನಿತ್ಯಾನಂದ ಸ್ವಾಮಿ ವಿರುದ್ಧ ಮಾಜಿ ಶಿಷ್ಯೆಯರು ಅತ್ಯಾಚಾರ ಆರೋಪ ಮಾಡಿದ್ದರು. ಪ್ರಕರಣಗಳ ತನಿಖೆ ನಡೆಸಿದ ಸಿಐಡಿ, ಕೋರ್ಟ್‌ಗೆ ಆರೋಪ ಪಟ್ಟಿ ಕೂಡಾ ಸಲ್ಲಿಸಿದೆ. ಕೃತ್ಯಗಳಲ್ಲಿ ಜಾಮೀನು ಪಡೆದ ಬಳಿಕ ನಿತ್ಯಾನಂದ ಸ್ವಾಮಿ ದೇಶ ತೊರೆದು ವಿದೇಶಕ್ಕೆ ಪರಾರಿಯಾಗಿದ್ದರು. ದಕ್ಷಿಣ ಅಮೆರಿಕಾದಲ್ಲಿ ದ್ವೀಪ ಖರೀದಿಸಿ ‘ಕೈಲಾಸ’ ಹೆಸರಿನಲ್ಲಿ ತನ್ನದೇ ದೇಶ ಘೋಷಿಸಿಕೊಂಡು ನೆಲೆಸಿದ್ದಾರೆ.

Leave a Reply

Your email address will not be published. Required fields are marked *