ಭಾರತ ಸದ್ಯ ಅವಕಾಶಗಳ ನೆಲವಾಗಿ ಉಳಿದಿಲ್ಲ: ಡಾ| ಆನಂದ ರಂಗನಾಥನ್ ಅಭಿಪ್ರಾಯ.

0

ಮಂಗಳೂರು, ಸೆ.೩: ಭಾರತ ಸದ್ಯ ಅವಕಾಶಗಳ ನೆಲವಾಗಿ ಉಳಿದಿಲ್ಲ, ಕಳೆದ ಮೂವತ್ತು ವರ್ಷಗಳ ಹಿಂದೆ ಅವಕಾಶಗಳ ನೆಲವಾಗಿತ್ತು, ಈಗ ಅವಕಾಶಗಳನ್ನು ಕಳೆದುಕೊಂಡ ನೆಲವಾಗಿದೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ನಮ್ಮ ಭವಿಷ್ಯ ಇನ್ನಷ್ಟು ಮಾರಕವಾಗುವ ಸಾಧ್ಯತೆಯಿದೆ ಎಂದು ಲೇಖಕ, ಸಂಶೋಧಕ ಡಾ| ಆನಂದ ರಂಗನಾಥನ್ ಅಭಿಪ್ರಾಯಪಟ್ಟರು.
ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲ್ಲಿ ರವಿವಾರ ಸ್ವಚ್ಛ ಮಂಗಳೂರು ಫೌಂಡೇಶನ್ ಮತ್ತು ಜ| ಕೆ.ಎಸ್.ಹೆಗ್ಡೆ ಚಾರಿಟೆಬಲ್ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಜಿಜ್ಞಾಸಾ-ಸನಾತನ ಚಿಂತನ ಗಂಗಾ ಸರಣಿ ಉಪನ್ಯಾಸ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಪ್ರವಾಸೋದ್ಯಮದಲ್ಲಿ ನಮಲ್ಲಿ ವಿಪುಲವಾದ ಅವಕಾಶಗಳಿದ್ದರೂ, ಅದನ್ನು ಬಳಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ನದಿಗಳನ್ನು ಜೋಡಿಸುವ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಾದ ನಾವು ರೈಲಿನಲ್ಲಿ ನೀರಿನ ಸಾಗಾಟಕ್ಕೆ ಹಸಿರು ನಿಶಾನೆ ತೋರಿಸುತ್ತಿದ್ದೇವೆ ಎಂದರು. ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆಯನ್ನು ವಾಪಾಸು ಪಡೆದಿರುವುದು ಈ ದೇಶ ಸ್ವಾತಂತ್ರ್ಯಾ ನಂತರದ ಅತೀ ದೊಡ್ಡ ದುರಂತದ ತೀರ್ಮಾನಗಳಲ್ಲಿ ಒಂದಾಗಿದೆ ಎಂದು ಅಭಿಪ್ರಾಯಪಟ್ಟರು.

ರಾಮಕೃಷ್ಣ ಮಠ ಮಂಗಳೂರು  ಸ್ವಾಮಿ ಜಿತಕಾಮಾನಂದ ಜೀ ಅವರು ಆಶೀರ್ವಚನ ನೀಡಿ, ವಿವಿಧ ವಿಚಾರಗಳಲ್ಲಿ ವಿಶ್ವಕ್ಕೆ ಭಾರತ ನೀಡಿರುವ ಕೊಡುಗೆ ಅವಿಸ್ಮರಣೀಯವಾದುದು. ಅನಾದಿ ಕಾಲದಿಂದಲೂ ಸಾಕಷ್ಟು ಉತ್ತಮ ವಿಚಾರಗಳನ್ನ ಹೊಂದಿದ್ದು, ಬಹುತೇಕ ದಾಖಲೆಯಾಗದೇ ಹೋಗಿದೆ. ಕೆಲವು ವಿಚಾರಗಳನ್ನು ಮುಂದಿನ ತಲೆಮಾರಿಗೆ ಕಲಿಸಿಕೊಡುವಲ್ಲಿ ವಿಫಲವಾಗಿದ್ದೇವೆ. ಅದರೂ ದೇಶ ವಿವೇಕಾನಂದರ ಚಿಂತನೆಯಂತೆ ವಿಶ್ವದಲ್ಲೇ ಗುರುವಿನ ಸ್ಥಾನ ಪಡೆಯುವತ್ತ ಮುನ್ನಡೆಯುತ್ತಿದೆ ಎಂದರು.
ನಿಟ್ಟೆ (ಡೀಮ್ಡ್ ಟುಬಿ) ಯುನಿವರ್ಸಿಟಿ. ಕುಲಾಧಿಪತಿ  ಎನ್.ವಿನಯ ಹೆಗ್ಡೆ ಅ‘ಕ್ಷತೆ ವಹಿಸಿದರು. ಇದೇ ವೇಳೆ ಆನಂದ್ ರಂಗನಾಥನ್ ಅವರ ಕೃತಿ ‘ಹಿಂದೂಸ್ ಇನ್ ಹಿಂದೂ ರಾಷ್ಟ್ರ’ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮ ಸಂಚಾಲಕ ಕ್ಯಾ| ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಸಹ ಸಂಚಾಲಕ, ಪ್ರೊ| ಧನೇಶ್ ಕುಮಾರ್ ವಂದಿಸಿದರು. ಐಶ್ವರ್ಯ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *