ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ವರ್ಗಾವಣೆ

0

ಅನುಪಮ ಅಗರ್ವಾಲ್

 

ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ವರ್ಗಾವಣೆಗೊಂಡಿದ್ದು, ನೂತನ ಪೊಲೀಸ್ ಕಮಿಷನರ್ ಆಗಿ ಅನುಪಮ್ ಅಗರ್ವಾಲ್ ನೇಮಕಗೊಂಡಿದ್ದಾರೆ.

 

ಕುಲದೀಪ್ ಆರ್.ಜೈನ್
ಅನುಪಮ ಅಗರ್ವಾಲ್.                ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸದ್ಯ ಕಾರ್ಯ ನಿರ್ವಹಿಸಿದ್ದ ಕುಲದೀಪ್ ಅರ್ ಜೈನ್ ಅವರು ತಮ್ಮ ಕಾರ್ಯ ನಿರ್ವಹಿಸಿದ್ದ ರೀತಿ ನಿಜಕ್ಕೂ ಶ್ಲಾಘನೀಯ.ಐಜಿ,ಡಿಐಜಿ ಮಟ್ಟದ ಅಧಿಕಾರಿಗಳು ನಿರ್ವಹಿಸುವ ಸ್ಥಾನ ಮಾನದ ಹುದ್ದೆಯನ್ನು ಎಸ್ಪಿ ಮಟ್ಟದ ಅಧಿಕಾರಿಯಾಗಿ ನಿರ್ವಹಿಸಲು ಸಾಧ್ಯ ಎಂದು ತೋರಿಸಿ ಕೊಟ್ಟಿದ್ದಾರೆ. ಕೇವಲ ಆರು ತಿಂಗಳ ಅವಧಿಯಲ್ಲಿ ಡ್ರಗ್ಸ್ ಮಾಫಿಯಾ,ಮರಳು ದಂಧೆ, ಮಟ್ಕಾ, ಗ್ಯಾಂಬ್ಲಿಂಗ್, ಟ್ರಾಫಿಕ್ ಸಮಸ್ಯೆ,ಜೊತೆಗೆ ಫೋನ್ ಇನ್ ಮೂಲಕ ಸಾಮಾನ್ಯ ಜನರ ಸಮಸ್ಯೆಗಳಿಗೂ ಪರಿಹಾರ ನೀಡುವ ಮೂಲಕ ಜನ ಸ್ನೇಹಿಯಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದರೆ ತಪ್ಪಾಗಲಾರದು.ಮೂಲಗಳ ಪ್ರಕಾರ ಹಲವಾರು ಪತ್ತೆಯಾಗದ ಪ್ರಕರಣಗಳ ವಿಲೇವಾರಿಗೆ ಖುದ್ದು ತಾನೇ ಆಸಕ್ತಿವಹಿಸಿ, ಹಲವು ಪ್ರಕರಣಗಳ ವಿಚಾರಣೆಗೆ ಹಾಜರಾಗದ ಆರೋಪಿಗಳ ವ್ಯಕ್ತಿಗಳ ಬಂಧನಕ್ಕೆ ಅಧಿಕಾರಿ ವರ್ಗಕ್ಕೆ ಮಾರ್ಗದರ್ಶನ ನೀಡಿ,ಪ್ರತಿ ದಿನವೂ ಎಂಬಂತೆ ಮೀಟಿಂಗ್ ನಡೆಸಿ ನಗರದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಪಡೆಯುತ್ತಿದ್ದರು. ಇತ್ತೀಚೆಗೆ ನಡೆದ ಬಸ್ ಅಪಘಾತದಲ್ಲಿ ಮೃತಪಟ್ಟ ಕಂಡೆಕ್ಟರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು ತಕ್ಷಣ ಪೊಲೀಸ್ ಅಧಿಕಾರಿ ವರ್ಗ, ಬಸ್ ಮಾಲಕರ ಸಂಘದವರನ್ನು ಕರೆದು ಸಭೆ ನಡೆಸಿ ಮುಂದೆ ಇಂತಹ ಘಟನೆ ನಡೆಯದಂತೆ ತಡೆಯಲು ತಿಳಿಸಿದ್ದರು. ನಗರದಲ್ಲಿ ಕಂಡು ಬರುವ ಸಮಸ್ಯೆಗಳನ್ನು ಪತ್ರಕರ್ತರು ಗಮನಕ್ಕೆ ತಂದರೆ ತಕ್ಷಣ ಕ್ರಮ ಕೈಗೊಂಡು ಅದಕ್ಕೆ ಪರಿಹಾರ ಸೂಚಿಸುತಿದ್ದರು. ನಗರದಲ್ಲಿ ಅತ್ಯಂತ ದಕ್ಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇನ್ನು ಮುಂದಕ್ಕೆ ಇನ್ನಷ್ಟು ಉನ್ನತ ಮಟ್ಟದ ಹುದ್ದೆಯನ್ನು ನಿರ್ವಹಿಸಲು ಅವಕಾಶ ಸಿಗಲಿ ಅನ್ನುವ ಹಾರೈಕೆ.

 

 

 

 

 

 

Leave a Reply

Your email address will not be published. Required fields are marked *