ಉಡುಪಿಯಲ್ಲಿ ಅ. 9ರಂದು ಓಷಿಯನ್ ಪರ್ಲ್ ಟೈಮ್ ಸ್ಕ್ವೇರ್ ಉದ್ಘಾಟನೆ.

0

ಉಡುಪಿ: ಉತ್ತರ ಹಾಗೂ ದಕ್ಷಿಣ ಭಾರತದಾದ್ಯಂತ ಹೆಸರು ಮಾಡಿರುವ ಓಷಿಯನ್ ಪರ್ಲ್ ಹೋಟೆಲ್ ಎರಡನೇ ಶಾಖೆ ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಟೋರ್ ಉಡುಪಿ-ಮಣಿಪಾಲ ರಸ್ತೆಯ ಕಲ್ಸಂಕದಲ್ಲಿರುವ ಮಾಂಡವಿ ಟೈಮ್ಸ್ ಸ್ಟ್‌‌ರ್ ಮಾಲ್‌ನಲ್ಲಿ ಅ. 9ರಂದು 12 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಟೈಮ್ಸ್ ಸ್ಟೈ‌ರ್ ಮಾಲ್ ಮಾಲೀಕ ಡಾ. ಜೆರ್ರಿ ವಿನ್ಸೆಂಟ್ ಡಯಾಸ್, ದೇಗುಲಗಳ ನಗರಿ ಎಂದೇ ಖ್ಯಾತಿ ಹೊಂದಿರುವ ಉಡುಪಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಈ ಹೋಟೆಲ್ ನಲ್ಲಿ 3 ಹಾಲ್ ಗಳಿದ್ದು, ಗ್ರಾಂಡ್ ದಿ ಪೆಸಿಫಿಕ್ 1 ಹಾಲ್‌ನಲ್ಲಿ ಸುಮಾರು 2,000 ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸಬಹುದು. ಮದುವೆಗಳು, ದೊಡ್ಡ ದೊಡ್ಡ ಸಮ್ಮೇಳನ ನಡೆಸಲು ಅನುಕೂಲಕರವಾಗಿದೆ. ಪೆಸಿಫಿಕ್&2 ಹಾಲ್ ಮಧ್ಯಮ ಗಾತ್ರದ ಕಾರ್ಯಕ್ರಮಗಳಿಗೆ ಸೂಕ್ತವಾಗಿದ್ದು, ಸುಮಾರು 250 ಮಂದಿ ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತದೆ. ಪೆಸಿಫಿಕ್-3 ಹಾಲ್‌ನಲ್ಲಿ 800 ಮಂದಿ ಭಾಗವಹಿಸಬಹುದು ಎಂದು ಮಾಹಿತಿ ನೀಡಿದರು.


67 ಕೊಠಡಿ ಸೌಲಭ್ಯ ಅತ್ಯುತ್ತಮ ದರ್ಜೆಯ ವಿನ್ಯಾಸ, ಒಳಾಂಗಣಗಳನ್ನು ಹೊಂದಿರುವ ಹೋಟೆಲ್‌ನಲ್ಲಿ ಪ್ರೆಸಿಡೆಂಟಲ್ ಸೂಟ್, ಕ್ಲಬ್ ಸೂಟ್ಸ್, ಫ್ಯಾಮಿಲಿ ಸೂಟ್ ಮತ್ತು ಡಿಲಕ್ಸ್ ರೂಮ್‌ಗಳು ಒಟ್ಟು 67 ಐಷಾರಾಮಿ ಕೊಠಡಿಗಳು ಲಭ್ಯವಿದೆ. ಜಿಮ್, ಫಿಟೈಸ್ ಸೆಂಟರ್, ಬಿಜಿನೆಸ್ ಲಾಂಜ್ ಸೌಲಭ್ಯಗಳಿವೆ. ಈಜು ಪ್ರಿಯರ ಅನುಕೂಲಕ್ಕಾಗಿ ಅಂತರರಾಷ್ಟ್ರೀಯ ಗುಣಮಟ್ಟದ ಉತ್ತಮ ವಿನ್ಯಾಸದ ಈಜು ಕೊಳವನ್ನು ನಿಮಾರ್ಣ ಮಾಡಲಾಗಿದೆ ಎಂದರು.

ದಿ ಓಷಿಯನ್ ಪರ್ಲ್ ಸಂಸ್ಥೆ ಹಿರಿಯ ಉಪಾಧ್ಯಕ್ಷ ಬಿ.ಎನ್. ಗಿರೀಶ್ ಮಾತನಾಡಿ, ಆಧುನಿಕ ವಾಸ್ತು ಶೈಲಿಯನ್ನು ಒಳಗೊಂಡಿರುವ ನೂತನ ಹೋಟೆಲ್ ನಲ್ಲಿ ದಕ್ಷಿಣ ಹಾಗೂ ಉತ್ತರ ಭಾರತದ ಆಹಾರ ಖಾದ್ಯ, ಕಾಂಟಿನೆಂಟಲ್, ಚೈನಿಸ್ ಆಹಾರ ಉತ್ಪನ್ನಗಳ ‘ಕೋರಲ್’ ರೆಸ್ಟೋರೆಂಟ್, ಜಾಸ್ ಸ್ಪೋರ್ಟ್ಸ್ ಬಾ‌ರ್ ಮತ್ತು ಜಾಸ್‌ ಎಕ್ಸಿಕ್ಯೂಟಿವ್ ಲಾಂಜ್‌ಗಳಿವೆ. ವಿವಿಧ ಬಗೆಯ ಪ್ರಾದೇಶಿಕ ಆಹಾರ ಉತ್ಪನ್ನಗಳು ಲಭ್ಯ ಇವೆ. ಸಾಗರ್‌ರತ್ನ ಹೋಟೆಲ್ 182 ಶಾಖೆಗಳನ್ನು ಹೊಂದಿದ್ದು, 11 ಸಾವಿರ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆಓಶಿಯನ್ ಪರ್ಲ್ ಹೋಟೆಲ್ ಮಂಗಳೂರು,ಉಡುಪಿ,ಉಜಿರೆ, ಹುಬ್ಬಳ್ಳಿ ಗ್ರಾಹಕರ ಮೆಚ್ಚುಗೆ ಗಳಿಸಿದೆ ಎಂದರು.


ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ, ಸ್ಥಳಿಯ ಮಸೀದಿ ಧರ್ಮಗುರು ಉಪಸ್ಥಿತರಿರುವರು ಎಂದರು.

ಸಾಗರ ರತ್ನ ಮತ್ತು ಓಶಿಯನ್ ಪರ್ಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಜಯರಾಮ್ ಬನಾನ್, ದಿ.ಟೈಮ್ ಸ್ಟೋ‌ರ್ ಮಾಲ್‌ನ ಜೇಸನ್ ಡಯಾಸ್, ಗ್ರೆನ್ ಡಯಾಸ್, ಜನರಲ್ ಮ್ಯಾನೇಜರ್ ಪ್ರಶಾಂತ್ ಆಚಾರ್ಯ, ಓಶಿಯನ್ ಪರ್ಲ್ ಉಪಾಧ್ಯಕ್ಷ ಶಿವಕುಮಾ‌ರ್ ಉಪಸ್ಥಿತರಿದ್ದರು.

ದಿ ಓಷಿಯನ್ ಪರ್ಲ್ ಬೀಚ್ ರೆಸಾರ್ಟ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಮಂಗಳೂರು-ಗೋವಾ ಮಧ್ಯೆ ಅತ್ಯುತ್ತಮ ರೆಸಾರ್ಟ್ ಇದಾಗಲಿದೆ. ಚಿಕ್ಕಮಗಳೂರಿನಲ್ಲಿ 100 ಎಕ್ರೆ ಪ್ರದೇಶದಲ್ಲಿ ಎಸ್ಟೇಟ್ ರೆಸಾರ್ಟ್ ನಿರ್ಮಿಸಲಾಗಿದ್ದು, ಮುಂದಿನ ವರ್ಷ ಲೋಕಾರ್ಪಣೆಗೊಳ್ಳಲಿದೆ.

ರೋಶನ್ ಬನಾನ್, ಆಡಳಿತ ನಿರ್ದೇಶಕರು, ದಿ ಓಷಿಯನ್ ಪರ್ಲ್ ಸಂಸ್ಥೆ

Leave a Reply

Your email address will not be published. Required fields are marked *