ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಸಿದ್ದ ಎಂದ ಸಿಎಂ ಸಿದ್ದರಾಮಯ್ಯ, ವಿವರ ತಿಳಿಯಿರಿ

0


bredcrumb

Karnataka

oi-Shankrappa Parangi

| Published: Thursday, June 1, 2023, 13:26 [IST]

Google Oneindia Kannada News

ಬೆಂಗಳೂರು, ಮೇ 31: ಕರ್ನಾಟಕದಲ್ಲಿ ಸರ್ಕಾರ ರಚಿಸಿದ ನಂತರ ಕಾಂಗ್ರೆಸ್ ಶಿಕ್ಷಕರ ನೇಮಕಾತಿ, ತುಟ್ಟಿಭತ್ಯೆ ಹೆಚ್ಚಳದಂತೆ ನಿರ್ಧಾರ ಪ್ರಕಟಿಸಿದೆ. ಇನ್ನೂ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಬಗ್ಗೆ ಯಾವುದು ಅಂತಿಮವಾಗಿಲ್ಲ. ಈ ಮಧ್ಯೆ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ಸ್ವತಃ ಮುಖ್ಯಮಂತ್ರಿಗಳೇ ಮಾತನಾಡಿದ್ದಾರೆ.

ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲು ತಮ್ಮ ಸರ್ಕಾರ ಬದ್ಧವಾಗಿದೆ. ಈ ಹಿಂದೆ ಕಾಯ್ದೆ ಜಾರಿ ಕುರಿತು ಮನವಿ ಮತ್ತು ಪ್ರತಿಭಟನೆ ಸಂದರ್ಭದಲ್ಲಿ ನಾನು ವಿರೋಧ ಪಕ್ಷದಲ್ಲಿದ್ದೇ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಭರವಸೆ ನೀಡಿದ್ದಾರೆ.

Congress Government Ready To Implement Advocate Protection Act: CM Siddaramaiah

ಈ ಹಿಂದೆ ಕರ್ನಾಟಕದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ರಾಜ್ಯದ ವಕೀಲರು ಪ್ರತಿಭಟನೆ ನಡೆಸುತ್ತಿದ್ದಾಗ ನಾನು ವಿರೋಧ ಪಕ್ಷದಲ್ಲಿದ್ದೆ. ಆಗ ಬಿಜೆಪಿ ಅಧಿಕಾರದಲ್ಲಿತ್ತು. ಈಗ ನಮ್ಮ ಕಾಂಗ್ರೆಸ್ ಸರ್ಕಾರ ಪೂರ್ಣ ಬಹುಮತ ಮೂಲಕ ಅಧಿಕಾರಕ್ಕೆ ಬಂಧಿದೆ. ಅಧಿಕಾರಕ್ಕೆ ಬಂದ ಮೇಲೆ ಬೇಡಿಕೆ ಈಡೇರಿಸಲಾಗುವುದು ಎಂದು ಅವರು ಹೇಳಿದರು.

ಯುಪಿ: ಅತೀಕ್ ಅಹ್ಮದ್ ಪರ ವಕೀಲರ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪಯುಪಿ: ಅತೀಕ್ ಅಹ್ಮದ್ ಪರ ವಕೀಲರ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪ

‘ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ವಕೀಲರು ನಡೆಸಿದ್ದ ಪ್ರತಿಭಟನೆಗೆ ನಾನು (ಸಿದ್ದಾರಾಮಯ್ಯ) ಸಹ ಬೆಂಬಲ ವ್ಯಕ್ತಪಡಿಸಿದ್ದೆ. ಕಾಯ್ದೆ ಜಾರಿ ಕುರಿತು ಬೆಳವಣಿಗೆ ಗಮನಿಸಿದ್ದೆ. ಆದರೆ ವಿರೋಧ ಪಕ್ಷದಲ್ಲಿದ್ದೆ, ಆಡಳಿತ ಪಕ್ಷ ಬೇಡಿಕೆ ಈಡೇರಿಸಲಿಲ್ಲ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ವಿದ್ದು, ಖಂಡಿತವಾಗಿಯೂ ಕಾಯ್ದೆ ಜಾರಿಗೊಳಿಸುತ್ತೇವೆ ಎಂದು ಅವರು ಪುನರುಚ್ಚರಿಸಿದರು.

ವಕೀಲರಿಗೆ ವಿಮಾ ಯೋಜನೆ ಜಾರಿ ಬಗ್ಗೆ ಚರ್ಚೆ

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ನ್ಯಾಯಮೂರ್ತಿ ಬಿ ವೀರಪ್ಪ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಈಗಾಗಲೇ ವಕೀಲರಿಗೆ ವಿಮಾ ಯೋಜನೆ ಜಾರಿಗೆ ತರುವಂತೆ ಬೆಂಗಳೂರು ವಕೀಲರ ಸಂಘ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

Congress Government Ready To Implement Advocate Protection Act: CM Siddaramaiah

ಈ ಕುರಿತು ಸೂಕ್ತವಾಗಿ ಸಚಿವರು ಮತ್ತು ಅಧಿಕಾರಿಗಳಿಗೆ ಚರ್ಚೆ ಮಾಡಿದ ನಂತರ ಅದನ್ನು ಪ್ರಾರಂಭಿಸಲು ತಮ್ಮ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಕೀಲರ ಸಂಘದ ಮುಖ್ಯಸ್ಥರಿಗೆ ಭರವಸೆ ನೀಡಿದರು.

ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳನ್ನು ಯಾವತ್ತು, ಹೇಗೆ ಜಾರಿ ಮಾಡುತ್ತದೆ ಎಂದೆಲ್ಲ ಜನರು, ವಿಪಕ್ಷ ನಾಯಕರು ಕಾಯುತ್ತಿದ್ದಾರೆ. ಇತ್ತ ವಿದ್ಯುತ್ ಬಿಲ್ ಕಟ್ಟಲು, ಬಸ್‌ನಲ್ಲಿ ಟಿಕೆಟ್ ಪಡೆಯಲು ಸಾರ್ವಜನಿಕರು ನಿರಾಕರಿಸುತ್ತಿರುವ ಘಟನೆ ದಿನೇ ದಿನೆ ಮರುಕಳಿಸುತ್ತಿವೆ.

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

English summary

Karnataka congress government ready to implement Advocate Protection Act: CM Siddaramaiah.

Story first published: Thursday, June 1, 2023, 13:26 [IST]

Source

Leave a Reply

Your email address will not be published. Required fields are marked *