ಕುಸ್ತಿಪಟುಗಳ ಪ್ರತಿಭಟನೆ: ವಿದೇಶಗಳಲ್ಲಿಯೂ ಸುದ್ದಿಯಾದ ಕುಸ್ತಿಪಟುಗಳ ನಕಲಿ ಚಿತ್ರ!
India
oi-Mamatha M
| Published: Thursday, June 1, 2023, 13:25 [IST]
ನವದೆಹಲಿ, ಜೂನ್. 01: ಮೇ 28 ರಂದು ಪ್ರತಿಭಟನೆಯ ಸಂದರ್ಭದಲ್ಲಿ ಭಾರತೀಯ ಕುಸ್ತಿಪಟುಗಳ ಗುಂಪನ್ನು ಪೊಲೀಸರು ಬಂಧಿಸಿದಾಗ, ಅವರಲ್ಲಿ ಒಬ್ಬರು ತೆಗೆದ ಸೆಲ್ಫಿಯ ಎರಡು ಆವೃತ್ತಿಗಳು ಟ್ವಿಟರ್‌ನಲ್ಲಿ ಭಾರೀ ವೈರಲ್ ಆಗಲು ಪ್ರಾರಂಭಿಸಿದವು. ಎರಡೂ ಚಿತ್ರಗಳಲ್ಲಿ ಪದಕ ವಿಜೇತರಾದ ವಿನೇಶ್ ಮತ್ತು ಸಂಗೀತಾ ಫೋಗಟ್ ಅವರು ಮೂವರು ಪೊಲೀಸ್ ಅಧಿಕಾರಿಗಳೊಂದಿಗೆ ಕುಸ್ತಿ ತಂಡದ ಇತರ ಬಂಧಿತ ಸದಸ್ಯರೊಂದಿಗೆ ಬಸ್‌ನಲ್ಲಿ ಕುಳಿತಿರುವುದನ್ನು ತೋರಿಸುತ್ತವೆ.
ಎರಡು ಚಿತ್ರಗಳು ಒಂದೇ. ಆದರೆ, ಅವುಗಳಲ್ಲಿ ಒಂದರಲ್ಲಿ ಕುಸ್ತಿಪಟುಗಳು ನಗುತ್ತಿರುವಂತೆ ಕಾಣುತ್ತಾರೆ. ಇನ್ನೊಂದರಲ್ಲಿ ಸಪ್ಪೆ ಮೊರೆಯಲ್ಲಿದ್ದಾರೆ. ಕುಸ್ತಿ ಫೆಡರೇಶನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಭಾರತೀಯ ಕುಸ್ತಿಪಟುಗಳು ನ್ಯಾಯಕ್ಕೆ ಆಗ್ರಹಿಸಿ ಒಂದು ತಿಂಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸುತ್ತಿದ್ದಾರೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸತ್ ಸದಸ್ಯರಾಗಿದ್ದಾರೆ. ಕುಸ್ತಿಪಟುಗಳು ಮಾಡಿರುವ ಆರೋಪಗಳನ್ನು ನಿರಾಕರಿಸಿದ್ದಾರೆ. ಹಾಗಾದರೇ ಈ ಎರಡು ಚಿತ್ರಗಳು ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ವೈರಲ್ ಆಗಿವೆ.ಅಂತರಾಷ್ಟ್ರೀಯ ಮಾಧ್ಯಮಗಳು ಈ ಚಿತ್ರಗಳ ಫ್ಯಾಕ್ಟ್‌ಚೆಕ್ ಮಾಡಿವೆ.
Wrestlers protest: ಕುಸ್ತಿಪಟುಗಳ ಪ್ರತಿಭಟನೆಗೆ ಮಹತ್ವದ ತಿರುವು ನೀಡಲಿದೆ ಇಂದಿನ ಮಹಾಪಂಚಾಯತ್!
ನಗುತ್ತಿರುವ ಮುಖಗಳನ್ನು ಹೊಂದಿರುವ ಚಿತ್ರವು ತ್ವರಿತವಾಗಿ ಆನ್‌ಲೈನ್‌ನಲ್ಲಿ ವೈರಲ್ ಆಯಿತು. ಕುಸ್ತಿಪಟುಗಳು ಪ್ರತಿಭಟನೆಗಳ ಬಗ್ಗೆ ಗಂಭೀರವಾಗಿಲ್ಲ ಮತ್ತು ಎಲ್ಲವನ್ನೂ ಮೊದಲೆ ಪ್ಲ್ಯಾನ್ ಮಾಡಲಾಗಿದೆ ಎಂದು ಹೇಳಿಕೊಳ್ಳಲಾಗಿತ್ತು. ಇದಲ್ಲದೆ ಈ ಚಿತ್ರವನ್ನು ಕೆಲವು ಬಿಜೆಪಿ ನಾಯಕರು ಮತ್ತು ಬೆಂಬಲಿಗರು ವ್ಯಾಪಕವಾಗಿ ಹಂಚಿಕೊಂಡಿದ್ದರು. ಬಳಿಕ ಕೆಲವರು ತಮ್ಮ ಟ್ವೀಟ್‌ಗಳನ್ನು ಅಳಿಸಿದ್ದಾರೆ.
ವಿರೋಧ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಆಡಳಿತ ಪಕ್ಷದ ಸಾಮಾಜಿಕ ಮಾಧ್ಯಮ ಘಟಕ, ಬಿಜೆಪಿ ಮಾಹಿತಿ ತಂತ್ರಜ್ಞಾನ (ಐಟಿ) ಕೋಶವು ಮೂಲ ಚಿತ್ರವನ್ನು ತಿರುವಿದೆ ಎಂದು ಆರೋಪಿಸಿದೆ. ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ ಸ್ವಲ್ಪ ಸಮಯದ ನಂತರ ಟ್ವಿಟರ್ ಬಳಕೆದಾರರು ಮೇ 28 ರಂದು ಸ್ಥಳೀಯ ಸಮಯ 12:31 ಕ್ಕೆ ಮೊದಲ ಚಿತ್ರವನ್ನು ಹಂಚಿಕೊಂಡಿದ್ದರು.
ತಿರುಚಿದ ಚಿತ್ರವು ಸುಮಾರು 90 ನಿಮಿಷಗಳ ನಂತರ ಕಾಣಿಸಿಕೊಂಡಿತು. ಕುಸ್ತಿಪಟುಗಳು ರಾಷ್ಟ್ರೀಯ ಆಟಗಳಲ್ಲಿ ಭಾಗವಹಿಸಲು ಬಯಸುವುದಿಲ್ಲ ಎಂಬ ಕಾರಣಕ್ಕಾಗಿ ಅಶಾಂತಿಯನ್ನು ಸೃಷ್ಟಿಸಲು ಇಂತಹ ಕೆಲಸ ಮಾಡುತ್ತಿದ್ದಾರೆ ಇದಕ್ಕೆ ಅವರು ನಾಚಿಕೆಪಡಬೇಕು ಎಂದು ಹಿಂದಿಯಲ್ಲಿ ಪಠ್ಯದೊಂದಿಗೆ ಬರೆಯಲಾಗಿದೆ. ಆರಾಮಾವಾಗಿ ಎಲ್ಲರಿಗೂ ಸಿಗುವ FaceApp ಸಾಫ್ಟ್‌ವೇರ್ ಅನ್ನು ಬಳಸಿಕೊಂಡು, ಮೂಲ ಚಿತ್ರವನ್ನು ಎಡಿಟ್ ಮಾಡಿ ಹಂಚಲಾಗಿದೆ.
ಕುಸ್ತಿಪಟುಗಳ ಪ್ರತಿಕ್ರಿಯೆ
ಎಡಿಟೆಡ್ ಚಿತ್ರ ವೈರಲ್ ಆಗಲು ಪ್ರಾರಂಭಿಸಿದ ಕೆಲವೇ ಗಂಟೆಗಳಲ್ಲಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಚಿತ್ರ ನಕಲಿ ಎಂದು ಟ್ವೀಟ್ ಮಾಡಿದ್ದಾರೆ.
IT Cell वाले ये झूठी तस्वीर फैला रहे हैं। हम ये साफ़ कर देते हैं की जो भी ये फ़र्ज़ी तस्वीर पोस्ट करेगा उसके ख़िलाफ़ शिकायत दर्ज की जाएगी। #WrestlersProtest pic.twitter.com/a0MngT1kUa
— Bajrang Punia 🇮🇳 (@BajrangPunia) May 28, 2023
ಘಟನೆ ಬಗ್ಗೆ ಮಾಹಿತಿ ಪಡೆಯಲು ಬಿಬಿಸಿ ಸುದ್ದಿ ಸಂಸ್ಥೆ ವಿನೇಶ್ ಮತ್ತು ಸಂಗೀತಾ ಫೋಗಟ್ ಅವರು ಮೂಲ ಫೋಟೋವನ್ನು ಏಕೆ ತೆಗೆದುಕೊಂಡಿದ್ದರು ಎಂದು ಇಬ್ಬರನ್ನೂ ಸಂಪರ್ಕಿಸಿ ಪ್ರಶ್ನಿಸಿದ್ದಾರೆ. “ಅವರು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದಾರೆ ಎಂಬ ಬಗ್ಗೆ ನಮಗೆ ಅನಿಶ್ಚಿತತೆ ಮತ್ತು ಭಯವಿತ್ತು. ನಮ್ಮೊಂದಿಗೆ ಯಾರೆಲ್ಲರನ್ನು ಬಂಧಿಸಲಾಗಿದೆ ಎಂದು ತಿಳಿಯಲು ನಾವು ಬಯಸಿದ್ದೇವು” ಎಂದು ಸಂಗೀತಾ ಸಂದೇಶದ ಮೂಲಕ ಉತ್ತರಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಎಡಿಟ್ ಮಾಡಿದ ಚಿತ್ರವನ್ನು ಸೂಕ್ಷಮವಾಗಿ ಗಮನಿಸದೆ ಅದು ನಕಲಿ ಚಿತ್ರವೆಂದು ತಿಳಿಯುವುದಿಲ್ಲ. “ಎಲ್ಲಾ ಮುಖಗಳಲ್ಲೂ ಒಂದೇ ರೀತಿಯ ನಗು ಇತ್ತು, ಅವರೆಲ್ಲರ ಹೊಳೆಯುವ ಬಿಳಿ ಹಲ್ಲುಗಳು. ಕೆನ್ನೆಯ ಮೇಲಿನ ಡಿಂಪಲ್ಗಳು ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂಬ ಸುಳಿವು ನೀಡುತ್ತಿತ್ತು. ನಾವು ವಿನೇಶ್ ಮತ್ತು ಸಂಗೀತಾ ಫೋಗಟ್ ಅವರ ಹಿಂದಿನ ಚಿತ್ರಗಳನ್ನು ನೋಡಿದೆವು. ಇಬ್ಬರಿಗೂ ಡಿಂಪಲ್‌ಗಳಿಲ್ಲ ಮತ್ತು ಅವರ ಹಲ್ಲುಗಳು ವಿಭಿನ್ನವಾಗಿ ಕಾಣುತ್ತವೆ” ಎಂದು ಸೆಂಟರ್ ಫಾರ್ ಇನ್ಫಾರ್ಮೇಶನ್ ರೆಸಿಲಿಯನ್ಸ್‌ನ ತನಿಖಾ ನಿರ್ದೇಶಕ ಮತ್ತು ಓಪನ್ ಸೋರ್ಸ್ ಇನ್ವೆಸ್ಟಿಗೇಟರ್ ಬೆಂಜಮಿನ್ ಸ್ಟ್ರಿಕ್ ಹೇಳಿದ್ದಾರೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.
Allow Notifications
You have already subscribed
English summary
Wrestlers protest: Wrestlers two versions of selfie began circulating on Twitter, one is fake picture and this story gone international news. here is the full issue. know more.
Story first published: Thursday, June 1, 2023, 13:25 [IST]