LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ, ನಗರವಾರು ದರಗಳ ವಿವರ ಇಲ್ಲಿದೆ
Business
oi-Madhusudhan KR
| Updated: Thursday, June 1, 2023, 11:38 [IST]
ನವದೆಹಲಿ, ಜೂನ್, 01: ಈ ಹಿಂದೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 1,000 ರೂಪಾಯಿ ಗಡಿ ದಾಟಿತ್ತು. ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕರು ಆಗಿನ ಆಡಳಿತ ಸರ್ಕಾರ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 500 ರೂಪಾಯಿ ಇಳಿಕೆ ಮಾಡುತ್ತೇವೆಂದು ಹೇಳಿದ್ದರು. ಆದರೆ ಇದೀಗ ಇಂದಿನಿಂದಲೇ ಅಂದರೆ ಜೂನ್ 1ರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಹಾಗಾದರೆ ಎಷ್ಟು ಕಡಿತವಾಗಿದೆ ಎಂದು ಇಲ್ಲಿ ತಿಳಿಯಿರಿ
2023ರ ಜೂ ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ತೈಲ ಕಂಪನಿಗಳು ಜೂನ್ 1ರಂದು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕಡಿತ ಮಾಡಿವೆ ಎನ್ನುವ ಮಾಹಿರಿ ಲಭ್ಯವಾಗಿದೆ. ಸರ್ಕಾರಿ ತೈಲ ಕಂಪನಿಗಳು ಬಿಡುಗಡೆ ಮಾಡಿದ ಬೆಲೆಯ ಪ್ರಕಾರ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 83 ರೂಪಾಯಿನಷ್ಟು ಇಳಿಕೆಯಾಗಿದೆ ಎಂದು ದಿ ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗೆ ಈಗ 1773 ರೂಪಾಯಿ ಆಗಿದೆ. ಈ ಮೊದಲು ಸಿಲಿಂಡರ್ ಬೆಲೆ 1856.50 ರೂಪಾಯಿ ಇತ್ತು. ಆದರೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಮೊದಲಿನ ದರದಲ್ಲೇ ದೊರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗುದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಪರಿಹಾರ ನೀಡುವುದಲ್ಲದೆ, ಜೆಟ್ ಇಂಧನ ಬೆಲೆಯನ್ನು ತೈಲ ಕಂಪನಿಗಳು ಕಡಿತಗೊಳಿಸಿವೆ.
ಜೆಟ್ ಇಂಧನ ಬೆಲೆಯಲ್ಲಿ ಇಳಿಕೆಯಾಗಿದ್ದು ಎಷ್ಟು?
ಜೆಟ್ ಇಂಧನ ಬೆಲೆಯಲ್ಲಿ ಸುಮಾರು 6,600 ರೂಪಾಯಿ ಇಳಿಕೆ ಆಗಿದೆ. ಇದು ಮುಂದಿನ ದಿನಗಳಲ್ಲಿ ವಿಮಾನ ಪ್ರಯಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹಾಗಯೆ ಜೂನ್ 1 ರಿಂದ ಹೊಸ ದರಗಳನ್ನು ಜಾರಿಗೆ ಮಾಡಲಾಗಿದೆ. ತೈಲ ಕಂಪನಿಗಳು ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ನಗರವಾರು ಸಿಲಿಂಡರ್ ದರಗಳ ವಿವರ
ಇನ್ನು ನವದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 1856.50-1773 ರೂಪಾಯಿಗೆ ಇಳಿದಿದೆ. ಕೋಲ್ಕತ್ತಾದಲ್ಲಿ ಹಿಂದಿನ 1960.50 ರೂಪಾಯಿಗೆ ಹೋಲಿಸಿದರೆ ಈಗ 1875.50 ರೂಪಾಯಿ ಸಿಲಿಂಡರ್ ದರ ಇದೆ. ಅದೇ ರೀತಿ ಈ ಹಿಂದೆ ಮುಂಬೈನಲ್ಲಿ 1808.50 ರೂಪಾಯಿಗೆ ಸಿಲಿಂಡರ್ ಲಭ್ಯವಿದ್ದು, ಈಗ 1725 ರೂಪಾಯಿಗೆ ಲಭ್ಯ ಆಗಲಿದೆ. ಚೆನ್ನೈನಲ್ಲಿ 2021.50 ರೂಪಾಯಿಯಿಂದ 1937 ರೂಪಾಯಿಗೆ ಇಳಿದಿದೆ.
ಎಲ್‌ಪಿಜಿಯ ಹೊರತಾಗಿ ತೈಲ ಕಂಪನಿಗಳು ಎಟಿಎಫ್ ಬೆಲೆಯನ್ನು ತೀವ್ರವಾಗಿ ಕಡಿತಗೊಳಿಸಿವೆ. ಒಂದು ಕಿಲೋ ಲೀಟರ್ ಬೆಲೆ 6600 ರೂಪಾಯಿಗೆ ಇಳಿದಿದೆ. ಇನ್ನು ನವದೆಹಲಿಯಲ್ಲಿ ಎಟಿಎಫ್ ಬೆಲೆ ಹಿಂದಿನ 95935.34 ರೂಪಾಯಿಯಿಂದ 89,303.09 ರೂಪಾಯಿಗೆ ಇಳಿದಿದೆ. ಈ ಹಿಂದೆ ಮುಂಬೈನಲ್ಲಿ ಪ್ರತಿ ಕಿಲೋ ಲೀಟರ್‌ಗೆ 89348.60 ರೂಪಾಯಿ ಬೆಲೆ ಇತ್ತು.
ಇದು ಈಗ ಪ್ರತಿ ಕಿಲೋಲೀಟರ್‌ಗೆ 83,413.96 ರೂಪಾಯಿ ದರದಲ್ಲಿ ಲಭ್ಯ ಇರುತ್ತದೆ. ಹೀಗೆ ದರ ಇಳಿಕೆ ಆಗಿದ್ದು, ಕೋಲ್ಕತ್ತಾದಲ್ಲಿ ಪ್ರತಿ ಕಿಲೋ ಲೀಟರ್‌ಗೆ 95,963.95 ರೂಪಾಯಿ ಮತ್ತು ಚೆನ್ನೈನಲ್ಲಿ 93,041.33 ರೂಪಾಯಿ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಾರ್ಚ್ ವೇಳೆಗೆ ದರದಲ್ಲಿ ಬದಲಾವಣೆ
ಕಳೆದ ಕೆಲವು ತಿಂಗಳುಗಳಿಂದ ದೇಶೀಯ ಎಲ್‌ಪಿಜಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕಳೆದ ಬಾರಿ ಮಾರ್ಚ್ ವೇಳೆಗೆ ಇದರಲ್ಲಿ ಬದಲಾವಣೆ ಆಗಿತ್ತು. ಅಂದಿನಿಂದ ಇಂದಿನವರೆಗೂ ಅದರ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಲೇಹ್ 1340 ರೂಪಾಯಿ, ಐಜ್ವಾಲ್ 1260 ರೂ., ಭೋಪಾಲ್ 1108.5 ರೂ., ಜೈಪುರ 1106.5 ರೂ., ಬೆಂಗಳೂರು 1105.5 ರೂ., ನವದೆಹಲಿ 1103 ರೂ., ಮುಂಬೈನಲ್ಲಿ 1102.5 ರೂ., ಮತ್ತು ಶ್ರೀನಗರದಲ್ಲಿ 1219 ರೂಪಾಯಿನಷ್ಟಿದೆ.
ಇನ್ನು ಪಾಟ್ನಾ 1201 ರೂ., ಕನ್ಯಾಕುಮಾರಿ 1187 ರೂ., ಅಂಡಮಾನ್ 1179 ರೂ., ರಾಂಚಿ 1160.5 ರೂ., ಡೆಹ್ರಾಡೂನ್ 1122 ರೂ., ಚೆನ್ನೈ 1118.5 ರೂ., ಆಗ್ರಾ 1115.5 ರೂ., ಚಂಡೀಗಢ 1112.5 ರೂ., ಅಹಮದಾಬಾದ್ 1112.5 ರೂ., ಇದೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.
Allow Notifications
You have already subscribed
English summary
LPG cylinder price reduced from today, here see complete details.