Savarkar Movie: ಸಾವರ್ಕರ್‌ ಸಿದ್ದಾಂತದ ವಿರುದ್ಧ ನಿಂತಿದ್ದ ನೇತಾಜಿ: ಸತ್ಯಸಂಗತಿ ತಿರುಚಿದ ರಣದೀಪ್‌ ಹೂಡಾ- ಹಾಗಾದರೇ ಸತ್ಯವೇನು

0


bredcrumb

India

oi-Ravindra Gangal

| Published: Thursday, June 1, 2023, 11:03 [IST]

Google Oneindia Kannada News

ಬೆಂಗಳೂರು, ಜೂನ್ 01: ಸ್ವತಂತ್ರ ವೀರ್ ಸಾವರ್ಕರ್ ಚಿತ್ರವು ಭಾರೀ ವಿವಾದಕ್ಕೆ ಗ್ರಾಸವಾಗಿದೆ. ವಿನಾಯಕ್ ದಾಮೋದರ್ ಸಾವರ್ಕರ್ ಪಾತ್ರದಲ್ಲಿ ನಟಿಸಿರುವ ಬಾಲಿವುಡ್‌ ನಟ ರಣದೀಪ್ ಹೂಡಾ ಅವರು ಈ ಚಿತ್ರವನ್ನು ನಿರ್ಧೇಶನ ಮಾಡಿದ್ದಾರೆ. ಸ್ವತಂತ್ರ ಸೇನಾನಿಗಳಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಖುದಿರಾಮ್ ಬೋಸ್ ಅವರಂತಹ ಕ್ರಾಂತಿಕಾರಿಗಳಿಗೆ ಸಾವರ್ಕರ್ ಸ್ಫೂರ್ತಿ ಎಂದು ಟ್ವೀಟ್ ಮಾಡಿದ್ದಾರೆ. ಇದು ದೇಶದಾದ್ಯಂತ ಭಾರೀ ವಿವಾದವನ್ನು ಸೃಷ್ಟಿಸಿದೆ.

ಸಾವರ್ಕರ್‌ ಬಯೋಪಿಕ್‌ನ ಟೀಸರ್‌ನಲ್ಲಿ ಇದನ್ನು ಕಾಣಬಹುದಾಗಿದೆ. ನೇತಾಜಿ ಸುಭಾಸ್‌ ಚಂದ್ರ ಬೋಸ್‌ ಅವರಿಗೆ ಸಾವರ್ಕರ್‌ ಸ್ಪೂರ್ತಿಯಾಗಿದ್ದರು ಎಂದು ಹೇಳಲಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬೋಸ್ ಅವರ ಕುಟುಂಬ ಸದಸ್ಯರು ಸಾವರ್ಕರ್‌ ಬಯೋಪಿಕ್‌ ಅನ್ನು ತಿರುಚಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರೇರೇಪಿಸುವಲ್ಲಿ ಸಾವರ್ಕರ್ ಪಾತ್ರವನ್ನು ವಹಿಸಿರಲಿಲ್ಲ. ಈ ತರಹದ ಹೇಳಿಕೆಗಳನ್ನು ನಾವು ನಿರಾಕರಿಸಿವುದಾಗಿ ಕುಟಂಬ ಸದಸ್ಯರು ಹೇಳಿದ್ದಾರೆ.

Savarkar Movie: Did Netaji Subhash Chandra and Khudiram Bose Really Inspired by Savarkar

ನೇತಾಜಿ ಅವರ ಪುತ್ರಿ ಅನಿತಾ ಬೋಸ್ ಅವರು ತಮ್ಮ ತಂದೆ ಮತ್ತು ಸಾವರ್ಕರ್ ನಡುವಿನ ಏಕೈಕ ಸಾಮಾನ್ಯ ಸಂಗತಿ ಎಂದರೆ ಅವರು ಪ್ರತಿನಿಧಿಸುವ ಧರ್ಮ ಎಂದು ಹೇಳಿದ್ದಾರೆ. ಮಹಾತ್ಮ ಗಾಂಧೀಜಿ ರೀತಿಯಲ್ಲೇ ಧರ್ಮಗಳ ಆಧಾರದ ಮೇಲೆ ರಾಷ್ಟ್ರ ವಿಭಜನೆಯ ವಿರುದ್ಧ ನಿಂತಿದ್ದರು. ಅದು ಬಿಟ್ಟರೆ ನೇತಾಜೀ ಹಾಗೂ ಸಾವರ್ಕರ್ ಅವರಿಗೆ ಸಂಬಂಧವೇ ಇಲ್ಲ. ವಿಚಾರಗಳನ್ನು ತಿರುಚುವ ಬದಲು ನೇತಾಜಿ ಅವರ ಭಾರತದ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

‘ಮಹಾತ್ಮ ಗಾಂಧಿಯವರಂತೆ, ನೇತಾಜಿಯವರು ಧಾರ್ಮಿಕ ಭಿನ್ನಾಭಿಪ್ರಾಯಗಳ ಆಧಾರದ ಮೇಲೆ ವಿಭಜನೆಯನ್ನು ವಿರೋಧಿಸಿದರು. ಸಾರ್ವರ್ಕರ್ ಅವರ ಅನುಯಾಯಿಗಳು ಇದನ್ನು ಅರ್ಥ ಮಾಡಿಕೊಳ್ಳಲಿ. ನೇತಾಜಿಯವರ ಭಾರತದ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲಿ. ಅವರನ್ನು ಹೈಜಾಕ್ ಮಾಡಬಾರದು’ ಎಂದು ‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಗೆ ಅನಿತಾ ಬೋಸ್ ತಿಳಿಸಿದ್ದಾರೆ.

Savarkar Movie: Did Netaji Subhash Chandra and Khudiram Bose Really Inspired by Savarkar

ಜಾತ್ಯತೀತ ಮತ್ತು ಅಖಂಡ ಭಾರತಕ್ಕಾಗಿ ನೇತಾಜಿ ಹಾಗೂ ಭಗತ್ ಸಿಂಗ್ ಹೋರಾಡಿದರು. ಅವರ ಸಿದ್ಧಾಂತಕ್ಕಿಂತ ಸಾವರ್ಕರ್ ಅವರ ಸಿದ್ಧಾಂತವು ಮೂಲಭೂತವಾಗಿ ಭಿನ್ನವಾಗಿದೆ ಎಂದು ನೇತಾಜಿಯವರ ಮೊಮ್ಮಗ ಚಂದ್ರ ಬೋಸ್ ಹೇಳಿದ್ದಾರೆ. ಸಾವರ್ಕರ್ ಅವರ ವಿಚಾರಗಳು ಮತ್ತು ಹಿಂದೂ ಮಹಾಸಭಾದೊಂದಿಗಿನ ಅವರ ಸಂಬಂಧದ ಬಗ್ಗೆ ನೇತಾಜಿ ವಿರೋಧ ವ್ಯಕ್ತಪಡಿಸಿದ ಅನೇಕ ನಿದರ್ಶನಗಳನ್ನು ಅವರು ತಿಳಿಸಿದ್ದಾರೆ.

ಮುಂಬರುವ ಬಯೋಪಿಕ್ ಅನ್ನು ಉದ್ದೇಶಿಸಿ ಮಾತನಾಡಿದ ಚಂದ್ರ ಬೋಸ್, ರಣದೀಪ್ ಹೂಡಾ ಅವರು ಸಾವರ್ಕರ್ ಅವರ ಮೇಲೆ ಚಲನಚಿತ್ರವನ್ನು ನಿರ್ಮಿಸುತ್ತಿರುವುದು ಶ್ಲಾಘನೀಯ, ಆದರೆ, ಅದು ಸಾವರ್ಕರ್ ಅವರ ವ್ಯಕ್ತಿತ್ವವನ್ನು ನಿಖರವಾಗಿ ಚಿತ್ರಿಸಬೇಕು ಎಂದು ತಿಳಿಸಿದ್ದಾರೆ. ಸಾವರ್ಕರ್ ಅವರನ್ನು ಕೇಂದ್ರೀಕರಿಸಿದ ಸಿನಿಮಾದಲ್ಲಿ ನೇತಾಜಿ, ಭಗತ್ ಸಿಂಗ್ ಮತ್ತು ಖುದಿರಾಮ್ ಬೋಸ್ ಅವರನ್ನು ಸೇರಿಸುವ ಅಗತ್ಯವಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.

Savarkar Movie: Did Netaji Subhash Chandra and Khudiram Bose Really Inspired by Savarkar

‘ನೇತಾಜಿ ಹಿಂದೂ ಮಹಾಸಭಾದ ವಿರುದ್ಧವಾಗಿದ್ದರು. ಅವರು ಹೆಚ್ಚು ಒಳಗೊಳ್ಳುವಿಕೆಯ ಮತ್ತು ಜಾತ್ಯತೀತ ಸಿದ್ಧಾಂತವನ್ನು ಹೊಂದಿದ್ದರು. ಚಿತ್ರವು ತಿರುಚಿದ ಸಂಗತಿಗಳನ್ನು ಪ್ರಸ್ತುತಪಡಿಸಿದರೆ, ದೇಶದ 140 ಕೋಟಿ ಜನರು ಅವರ (ಹೂಡಾ) ವಿರುದ್ಧ ಹೋರಾಡುತ್ತಾರೆ’ ಎಂದು ಬೋಸ್ ಹೇಳಿದ್ದಾರೆ.

ಖುದಿರಾಮ್ ಬೋಸ್ ಅವರ ಮೊಮ್ಮಗ ಸುಬ್ರತಾ ರಾಯ್ ಅವರು ಸಾವರ್ಕರ್‌ನಲ್ಲಿ ಖುದಿರಾಮ್ ಬೋಸ್ ಸ್ಫೂರ್ತಿಯನ್ನು ಕಂಡುಕೊಂಡಿದ್ದಾರೆ ಎಂದು ಸೂಚಿಸುವ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೇಮಚಂದ್ರ ಕನುಂಗೋ, ಸತ್ಯೇನ್ ಬೋಸ್ ಮತ್ತು ಅರಬಿಂದ ಘೋಷ್ ಅವರಂತಹ ವ್ಯಕ್ತಿಗಳಿಂದ ಖುದಿರಾಮ್ ಬೋಸ್ ಪ್ರಭಾವಿತರಾಗಿದ್ದರು ಎಂದು ರಾಯ್ ಹೇಳಿದ್ದಾರೆ.

ಮಹಾತ್ಮಾ ಗಾಂಧಿಯವರ ಅಹಿಂಸೆಯ ಅಚಲವಾದ ಬದ್ಧತೆಯ ಪರಿಣಾಮವಾಗಿ ಭಾರತದ ಸ್ವಾತಂತ್ರ್ಯವು 35 ವರ್ಷಗಳಷ್ಟು ವಿಳಂಬವಾಯಿತು ಎಂದು ಸೂಚಿಸುವ ಮೂಲಕ ಬಯೋಪಿಕ್‌ನ ಟೀಸರ್ ವಿವಾದವನ್ನು ಹುಟ್ಟುಹಾಕಿದೆ.

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

English summary

Swatantra Veer Savarkar Movie: Know the Truth and Facts Behind the Swatantra Veer Savarkar Movie, Did Savarkar Really Inspire Netaji, Khudiram Bose? What Netaji’s Family Says About This Movie Check Out on Oneindia Kannada.

Story first published: Thursday, June 1, 2023, 11:03 [IST]

Source

Leave a Reply

Your email address will not be published. Required fields are marked *