ಸಾಕು ಕುದುರೆ ಸಾವು: ಡೋಲು ಬಾರಿಸುತ್ತ ಶವಯಾತ್ರೆ ಮಾಡಿದ ಮಾಲೀಕ, ಗ್ರಾಮಸ್ಥರು ಭಾವುಕ

0


bredcrumb

India

oi-Sunitha B

| Published: Thursday, June 1, 2023, 10:51 [IST]

Google Oneindia Kannada News

ಮನುಷ್ಯರ ಅಂತ್ಯಸಂಸ್ಕಾರದ ಬಗ್ಗೆ ಹಲವು ಸ್ವಾರಸ್ಯಕರ ಸುದ್ದಿಗಳನ್ನು ನೀವು ಓದಿರಬೇಕು. ಇಂದು ನಾವು ಪ್ರಾಣಿಯ ಅಂತ್ಯಕ್ರಿಯೆಯ ಸುದ್ದಿಯನ್ನು ತರುತ್ತಿದ್ದೇವೆ. ವಾಸ್ತವವಾಗಿ ಪ್ರಾಣಿ ಪ್ರೇಮಿ ವಿಶುಂದೇವ ಪ್ರಸಾದ್ ಅವರ ಕುದುರೆ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಬಳಿಕ ಇದ್ದಕ್ಕಿದ್ದಂತೆ ಕುದುರೆ ಸತ್ತಿತು. ಇದಾದ ಬಳಿಕ ನಡೆದ ಘಟನೆಯಿಂದಾಗಿ ಕಣ್ಣುಗಳು ತುಂಬಿ ಬಂದಿವೆ.

ಬಿಹಾರದ ನಳಂದಾ ಜಿಲ್ಲೆಯಲ್ಲಿ ಕುದುರೆಯ ಶವಯಾತ್ರೆಯ ವೀಡಿಯೋ ನೋಡಿದ ಜನ ಭಾವುಕರಾಗಿದ್ದಾರೆ. ಬಿಹಾರ ಷರೀಫ್‌ನ ಪಟುವಾನಾ ಗ್ರಾಮದ ನಿವಾಸಿ ವಿಶುಂದೇವ ಪ್ರಸಾದ್ ಅವರು ಪ್ರಾಣಿಗಳ ಮೇಲಿನ ಅಪಾರ ಪ್ರೀತಿಯಿಂದ ಸುದ್ದಿಯಾಗಿದ್ದಾರೆ. ಅವರಿಗೆ ಕುದುರೆ ಸಾಕಾಣಿಕೆ ಮಾಡುವುದು, ಸವಾರಿ ಮಾಡುವುದೆಂದರೆ ತುಂಬಾ ಇಷ್ಟ.

Death of pet horse: Owner who performed funeral procession beating drums, villagers are emotional

ಹೀಗಾಗಿ ವಿಶುಂದೇವ ಪ್ರಸಾದ್ ಅವರು ತಮ್ಮ ಹವ್ಯಾಸವನ್ನು ಪೂರೈಸಲು ಕುದುರೆಯನ್ನು ಖರೀದಿಸಿದರು. ನಂತರ ಅದನ್ನು ತಮ್ಮ ವೃತ್ತಿಗೆ ಅವರು ಬಳಸುತ್ತಿದ್ದರು. ಅವರು ಕುದುರೆಗಳ ಮೇಲೆ ಹಗಲು ಕಳೆಯುತ್ತಿದ್ದರು. ಕುಟುಂಬದ ಸದಸ್ಯತಂತೆ ಕುದುರೆ ಕೂಡ ಅವರಿಗೆ ಬಹಳ ಹತ್ತಿರವಾಗಿತ್ತು. ಕುದುರೆಯೂ ಮಾಲೀಕನಿಗೆ ಗುರು ಶಿಷ್ಯನಂತಿತ್ತು.

ಅತ್ಯಧಿಕ ಅಂತರದಿಂದ ಕಾಂಗ್ರೆಸ್ ಗೆಲ್ಲಲಿದೆ : ಭವಿಷ್ಯ ನುಡಿದ 'ಓಡುವ ಕುದುರೆ' ಶಾಮನೂರು ಶಿವಶಂಕರಪ್ಪ ಅತ್ಯಧಿಕ ಅಂತರದಿಂದ ಕಾಂಗ್ರೆಸ್ ಗೆಲ್ಲಲಿದೆ : ಭವಿಷ್ಯ ನುಡಿದ ‘ಓಡುವ ಕುದುರೆ’ ಶಾಮನೂರು ಶಿವಶಂಕರಪ್ಪ

ಕುದುರೆಯು ತನ್ನ ಯಜಮಾನನ ಪ್ರತಿಯೊಂದು ಮಾತನ್ನೂ ಪಾಲಿಸಲು ಪ್ರಾರಂಭಿಸಿತು. ಕ್ರಮೇಣ ಯಜಮಾನ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯ ಹೆಚ್ಚಾಗತೊಡಗಿತು. ಇದು ಅದೆಷ್ಟು ಸುದ್ದಿಯಾಗಿತ್ತು ಅಂದರೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಸೋನ್‌ಪುರ ಮೇಳದಿಂದ ವಿಶುಂದೇವ ಪ್ರಸಾದ್ ಕುದುರೆಯನ್ನು ಖರೀದಿಸಿದ್ದರು.

ಆದರೆ ಕೆಲವು ದಿನಗಳಿಂದ ಕುದುರೆಯ ಆರೋಗ್ಯ ಸರಿಯಿರಲಿಲ್ಲ, ಇದ್ದಕ್ಕಿದ್ದಂತೆ ಅದು ಸತ್ತಿತು. ಕುದುರೆಯ ಮರಣದ ನಂತರ, ವಿಶುಂದೇವ ಪ್ರಸಾದ್ ಅವರು ಕುಟುಂಬದ ಸದಸ್ಯರನ್ನು ಕಳೆದುಕೊಂಡಂತೆ ದುಖ:ವನ್ನು ವ್ಯಕ್ತಪಡಿಸಿದ್ದಾರೆ. ಕುದುರೆ ಗಾಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಅದರ ಅಂತ್ಯಕ್ರಿಯೆ ಸ್ಥಳಕ್ಕೆ ಕರೆದೊಯ್ದಿದ್ದಾರೆ. ವಿಶುಂದೇವ ಪ್ರಸಾದ್ ಅವರು ಕುದುರೆ ಶವವನ್ನು ತನ್ನ ಸ್ಥಳೀಯ ಹಳ್ಳಿಯಿಂದ ಬಂಡಿಯಲ್ಲಿ ಸುಮಾರು ಕಿಲೋ ಮೀಟರ್ ಮೆರವಣೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಇನ್ನೂ ಅಲ್ಲಿ ಕುದುರೆಯನ್ನು ಬುಲ್ಡೋಜರ್‌ನಿಂದ ಹೂಳಲಾಯಿತು. ಕುದುರೆಯ ಶವಯಾತ್ರೆಯಲ್ಲಿ ಯಜಮಾನನಷ್ಟೇ ಅಲ್ಲ ಗ್ರಾಮದ ಜನರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Death of pet horse: Owner who performed funeral procession beating drums, villagers are emotional

ಪಶುಪಾಲಕ ವಿಶುಂದೇವ ಪ್ರಸಾದ್ ಅವರು ಕುದುರೆ ಸಾಕಾಣಿಕೆಯನ್ನು ತುಂಬಾ ಇಷ್ಟಪಡುತ್ತಾರೆ. ಹಲವು ವರ್ಷಗಳ ಹಿಂದೆ ಅವರು ತಮ್ಮ ಹವ್ಯಾಸವನ್ನು ಪೂರೈಸಲು ಸೋನ್‌ಪುರದಿಂದ ಕುದುರೆಯನ್ನು ಖರೀದಿಸಿದರು. ಕುದುರೆಯೊಂದಿಗೆ ಬಹಳ ಆಳವಾದ ಸ್ನೇಹ ಬೇರೂರಿತ್ತು. ಗ್ರಾಮದ ಮೂಲಕ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಮಾಲೀಕರು ಸಾಗಿ ಸ್ಥಳೀಯ ಸ್ಮಶಾನದಲ್ಲಿ ಸಮಾಧಿ ಮಾಡಿದರು.

Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Allow Notifications

You have already subscribed

English summary

A video of the owner beating a drum for the death of a pet horse went viral and the villagers were moved by the incident in Bihar.

Story first published: Thursday, June 1, 2023, 10:51 [IST]

Source

Leave a Reply

Your email address will not be published. Required fields are marked *