ಅಮೆರಿಕಾದಲ್ಲಿ ರಾಹುಲ್ ಗಾಂಧಿಯನ್ನು ತರಾಟೆ ತೆಗೆದುಕೊಂಡ ಖಲಿಸ್ತಾನಿ ಬೆಂಬಲಿಗರು
International
oi-Mamatha M
| Published: Thursday, June 1, 2023, 10:47 [IST]
ವಾಷಿಂಗ್ಟನ್, ಜೂನ್. 01: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಘೋಷಣೆಗಳನ್ನು ಕೂಗಿದ ಖಾಲಿಸ್ತಾನಿ ಬೆಂಬಲಿಗರ ಗುಂಪೊಂದು ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಇದರ ಜೊತೆಗೆ ಅವರ ಭಾಷಣಕ್ಕೆ ಕೆಲ ಕಾಲ ಅಡ್ಡಿಪಡಿಸಿದ ಘಟನೆ ವರದಿಯಾಗಿದೆ.
ಮಂಗಳವಾರ ಸಾಂತಾ ಕ್ಲಾರಾದಲ್ಲಿ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಯುಎಸ್‌ಎ ಆಯೋಜಿಸಿದ್ದ ‘ಮೊಹಬ್ಬತ್ ಕಿ ದುಕಾನ್’ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಿದ್ದಾಗ, 1984 ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದಂತೆ ಸಭಿಕರಿಂದ ಕೆಲವರು ರಾಹುಲ್ ಗಾಂಧಿ ಮತ್ತು ಗಾಂಧಿ ಕುಟುಂಬದ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.
ಈ ಘೋಷಣೆಗಳಿಂದ ಉದ್ವಿಗ್ನಗೊಳ್ಳದ ರಾಹುಲ್ ಗಾಂಧಿಯವರು ಘೋಷಣೆಗಳಿಗೆ ಪ್ರತಿಕ್ರಿಯೆಯಾಗಿ ಮುಗುಳ್ನಕ್ಕು ಹೇಳಿದರು: “ಸ್ವಾಗತ, ಸ್ವಾಗತ ನಫ್ರತ್ ಕೆ ಬಜಾರ್ ಮೇ ಮೊಹಬ್ಬತ್ ಕಿ ದುಕನ್” (ಸ್ವಾಗತ, ಸ್ವಾಗತ…ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ) ಎಂದು ಹೇಳಿದ್ದಾರೆ. ಬಳಿಕ 52 ವರ್ಷದ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಬೆಂಬಲಿಗರೊಂದಿಗೆ, ಸಭಿಕರೊಂದಿಗೆ ಸೇರಿಕೊಂಡು ‘ಭಾರತ್ ಜೋಡೋ’ ಘೋಷಣೆಗಳನ್ನು ಕೂಗಿದ್ದಾರೆ.
“ನಮ್ಮಲ್ಲಿ, ಕಾಂಗ್ರೆಸ್ ಪಕ್ಷದ ಬಗ್ಗೆ ಕುತೂಹಲಕಾರಿ ಸಂಗತಿಯೆಂದರೆ, ನಮಗೆ ಎಲ್ಲರ ಬಗ್ಗೆ ಪ್ರೀತಿ ಇದೆ, ಯಾರಾದರೂ ಬಂದು ಏನಾದರೂ ಹೇಳಲು ಬಯಸಿದರೆ, ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಲೆಕ್ಕಿಸದೆ ನಾವು ಅವರ ಮಾತನ್ನು ಕೇಳಲು ಸಂತೋಷಪಡುತ್ತೇವೆ. ನಾವು ಕೋಪಗೊಳ್ಳುವುದಿಲ್ಲ, ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ನಾವು ಅದನ್ನು ಕೇಳುತ್ತೇವೆ. ವಾಸ್ತವವಾಗಿ, ನಾವು ಅವರೊಂದಿಗೆ ಪ್ರೀತಿಯಿಂದ ವರ್ತಿಸುತ್ತೇವೆ, ಅವರನ್ನು ಪ್ರೀತಿಸುತ್ತೇವೆ. ಏಕೆಂದರೆ ಅದು ನಮ್ಮ ಸ್ವಭಾವ” ಎಂದು ತಿರುಗೇಟು ನೀಡಿದ್ದಾರೆ.
ಘಟನೆಯ ಕ್ಲಿಪ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಬಿಜೆಪಿ ನಾಯಕ ಅಮಿತ್ ಮಾಳವಿಯಾ, ” ರಾಹುಲ್ ಗಾಂಧಿ ಅವರು 1984 ರ ಸಿಖ್ ಹತ್ಯಾಕಾಂಡಕ್ಕೆ ಅಮೆರಿಕದಲ್ಲಿ ಪ್ರತಿಕ್ರಿಯೆ… ಐಸಿ ನಫ್ರತ್ ಕಿ ಆಗ್ ಲಗಾಯಿ ಥಿ, ಜೋ ಅಬ್ ತಕ್ ನಹೀ ಬುಜಿ ( ನೀವು ಹೊತ್ತಿಸಿದ ದ್ವೇಷದ ಬೆಂಕಿ ಇನ್ನೂ ಉರಿಯುತ್ತಿದೆ)” ಎಂದು ಹೇಳಿದ್ದಾರೆ.
Rahul Gandhi heckled for the 1984 Sikh genocide (unleashed by the Congress), in America…
ऐसी नफ़रत की आग लगायी थी, जो अब तक नहीं बुझी। pic.twitter.com/ind5ZcIym8
— Amit Malviya (@amitmalviya) May 31, 2023
ಅಮಿತ್ ಮಾಳವಿಯಾ ಅವರ ಟೀಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್ ಅವರು ರಾಹುಲ್ ಗಾಂಧಿಯನ್ನು ವಿರೋಧಿಸಲು ಖಲಿಸ್ತಾನ್ ಪರ ಅಂಶಗಳನ್ನು ಏಕೆ ಬೆಂಬಲಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.
Allow Notifications
You have already subscribed
English summary
Congress leader Rahul Gandhi was heckled by a group of Khalistani supporters at an event in the US state of California. know more.
Story first published: Thursday, June 1, 2023, 10:47 [IST]