500 ರೂಪಾಯಿಗೆ ಅಡುಗೆ ಅನಿಲ, 100 ಯೂನಿಟ್ ಉಚಿತ ವಿದ್ಯುತ್: ರಾಜಸ್ಥಾನ ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ಬಂಪರ್ ಕೊಡುಗೆ
India
oi-Ravindra Gangal
| Published: Thursday, June 1, 2023, 10:25 [IST]
ಜೈಪುರ, ಮೇ 01: ರಾಜಸ್ಥಾನದಲ್ಲಿನ ಕಾಂಗ್ರೆಸ್ ಸರ್ಕಾರ ಜನರಿಗೆ ಬಂಪರ್ ಕೊಡುಗೆ ನೀಡಿದೆ. 500 ರೂಪಾಯಿಗೆ ಅಡುಗೆ ಅನಿಲದ ನಂತರ 100 ಯೂನಿಟ್ ಉಚಿತ ವಿದ್ಯುತ್ ನೀಡಲು ಮುಂದಾಗಿದೆ. ಕರ್ನಾಟಕದಲ್ಲಿ ಭಾರೀ ಯಶಸ್ಸಿಗೆ ಕಾರಣವಾಗಿರುವ ಉಚಿತ ಭಾಗ್ಯ ಯೋಜನೆಗಳನ್ನು ರಾಜಸ್ಥಾನದಲ್ಲಿ ಘೋಷಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಚುನಾವಣಾ ದಾಳವನ್ನು ಉರುಳಿಸಲು ಮುಂದಾಗಿದೆ.
ಪ್ರಸ್ತುತ ರಾಜಸ್ಥಾನದಲ್ಲಿ 500 ರೂಪಾಯಿಗೆ ಅಡುಗೆ ಅನಿಲವನ್ನು ನೀಡಲಾಗುತ್ತಿದೆ. ಈಗ 100 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲು ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಸಾರ್ವಜನಿಕರಿಂದ ಭಾರೀ ಬೇಡಿಕೆ ಇತ್ತು ಎಂದು ಗೆಹಲೋಟ್ ಹೇಳಿದ್ದಾರೆ.
‘ಹಣದುಬ್ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಹಲವು ದಿನಗಳಂದ ನಾವು ಚರ್ಚೆ ನಡೆಸಿದ್ದೆವು. ಈ ವಿಚಾರವಾಗಿ ಸಾರ್ವಜನಿಕರೊಂದಿಗೆ ಮಾತನಾಡಿದ್ದೆವು. ವಿದ್ಯುತ್ ಬಿಲ್‌ಗಳಲ್ಲಿ ಸ್ಲ್ಯಾಬ್‌ವಾರು ವಿನಾಯಿತಿಯಲ್ಲಿ ಸ್ವಲ್ಪ ಬದಲಾವಣೆಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು’ ಎಂಬುದಾಗಿ ಗೆಹಲೋಟ್ ತಿಳಿಸಿದ್ದಾರೆ.
ತಿಂಗಳ ವಿದ್ಯುತ್ ಬಿಲ್‌ಗಳಲ್ಲಿ ಹೆಚ್ಚುವರಿ ಶುಲ್ಕದ ಬಗ್ಗೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಪಡೆಯಲಾಯಿತು. ಮೇ ತಿಂಗಳಿನಲ್ಲಿ, ಅದರ ಆಧಾರದ ಮೇಲೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹಿಂದಿಯಲ್ಲಿ ಗೆಹಲೋಟ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಜ್ಮೀರ್‌ನಿಂದ ಪಕ್ಷದ ಪ್ರಚಾರವನ್ನು ಪ್ರಾಯೋಗಿಕವಾಗಿ ನಿನ್ನೆ ಪ್ರಾರಂಭಿಸಿದ್ದಾರೆ. ರಾಜ್ಯ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಭ್ರಷ್ಟಾಚಾರ ಹಾಗೂ ಗುಂಪುಗಾರಿಕೆಯ ಬಗ್ಗೆ ಆರೋಪವನ್ನೂ ಮಾಡಿದ್ದರು. ಇದೇ ದಿನದಂದು ಉಚಿತ ವಿದ್ಯುತ್ ಘೋಷಣೆ ಮಾಡುವ ಮೂಲಕ ಪ್ರಧಾನಿಗೆ ಟಕ್ಕರ್ ಕೊಡುವ ಯತ್ನವನ್ನು ರಾಜಸ್ಥಾನ ಸರ್ಕಾರ ಮಾಡಿದೆ.
ಗೆಹಲೋಟ್ ಅವರು ಅಡುಗೆ ಅನಿಲದ ಮೇಲೆ ಭಾರೀ ಸಬ್ಸಿಡಿಯನ್ನು ನೀಡುವುದಾಗಿ ಡಿಸೆಂಬರ್‌ನಲ್ಲಿ ಭರವಸೆ ನೀಡಿದ್ದರು. ಡಿಸೆಂಬರ್ ನಂತರ ರಾಜಸ್ಥಾನದಲ್ಲಿ ಅಡುಗೆ ಅನಿಲವು ₹ 500 ಕ್ಕೆ ದೊರೆಯುತ್ತಿದೆ. ಪ್ರತಿ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ಖರೀದಿಸಬಹುದು.
ಕಳೆದ ವರ್ಷ ಸರ್ಕಾರವು ಸರ್ಕಾರಿ ಆಸ್ಪತ್ರೆಗಳಲ್ಲಿ ₹ 25 ಲಕ್ಷದವರೆಗೆ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ನೀಡುವ ಮೆಗಾ ಆರೋಗ್ಯ ವಿಮಾ ಯೋಜನೆಯನ್ನು ಸಹ ಪ್ರಾರಂಭಿಸಿತ್ತು. ಸಾಮಾಜಿಕ ಭದ್ರತಾ ಯೋಜನೆಯಡಿ ಕನಿಷ್ಠ ಮಾಸಿಕ ಪಿಂಚಣಿಯನ್ನೂ ₹ 1,000ಕ್ಕೆ ಹೆಚ್ಚಿಸಲಾಗಿದೆ.
ದೆಹಲಿ ಮತ್ತು ಪಂಜಾಬ್‌ನಲ್ಲಿ ಎಎಪಿಗೆ ಭಾರೀ ಚುನಾವಣಾ ಲಾಭ ನೀಡಿದ ಉಚಿತ ನೀರು ಮತ್ತು ವಿದ್ಯುತ್ ಭರವಸೆ ಕರ್ನಾಟಕದಲ್ಲಿಯೂ ಕಾಂಗ್ರೆಸ್‌ಗೆ ಕೆಲಸ ಮಾಡಿದೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.
Allow Notifications
You have already subscribed
English summary
The Congress government in Rajasthan has made a bumper contribution to the people. After cooking gas for Rs 500, it has offered 100 units of free electricity.
Story first published: Thursday, June 1, 2023, 10:25 [IST]